ಕುಕ್ಕೆ:ತಪಸ್ಯಾಗೆ ರಾಷ್ಟç ಮಟ್ಟದಲ್ಲಿ ಚಿನ್ನದ ಪದಕ



(ನ್ಯೂಸ್‌ ಕಡಬ) newskadaba.com,ಜ.02: ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಪಸ್ಯಾ.ಎಸ್.ನಾಯಕ್ ರಾಷ್ಟç ಮಟ್ಟದ 69ನೇ ನೆಟ್ ಬಾಲ್ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ರಾಷ್ಟç ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.ಇದು ಗ್ರಾಮೀಣ ಪ್ರದೇಶ ಕುಕ್ಕೆಗೆ ಹೆಮ್ಮೆಯ ಗರಿಯಾಗಿದೆ.





69ನೇ ರಾಷ್ಟç ಮಟ್ಟದ ನೆಟ್‌ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವು ಕೇರಳವನ್ನು 4 ಅಂಕಗಳಿAದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.ಕರ್ನಾಟಕ ತಂಡದಲ್ಲಿ ಗ್ರಾಮೀಣ ಭಾಗ ಕುಕ್ಕೆಯ ವಿದ್ಯಾರ್ಥಿನಿ ತಪಸ್ಯಾ.ಎಸ್.ನಾಯಕ್ ಆಟವಾಡಿದ್ದರು.ಈ ಮೂಲಕ ಕಾಲೇಜಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟç ಮಟ್ಟದಲ್ಲಿ ಚಿನ್ನದ ಪದಕ ಗಳಿಸಿಕೊಟ್ಟಿದ್ದಾರೆ.ತಪಸ್ಯಾ ಅವರು ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಮತ್ತು ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಅವರ ಸುಪುತ್ರಿ.ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿನಿಯ ಸಾಧನೆಯನ್ನು ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಅರವಿಂದ.ಎ.ಸುತಗುAಡಿ ಅಭಿನಂದಿಸಿದ್ದಾರೆ.






ಭವ್ಯ ಮೆರವಣಿಗೆಗೆ ಸಿದ್ಧತೆ:

ರಾಷ್ಟç ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ತಂಡದ ಸದಸ್ಯರು ಒಂದು ವಾರಗಳ ವಿಶೇಷ ತರಬೇತಿಯನ್ನು ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪಡೆದಿದ್ದರು.ಅಲ್ಲದೆ ಕಾಲೇಜಿನ ವಿದ್ಯಾರ್ಥಿನಿಯೂ ತಂಡದಲ್ಲಿ ಆಟವಾಡಿ ಪ್ರತಿಭೆಯನ್ನು ತೋರ್ಪಡಿಸಿದ್ದರು.ಈ ಹಿನ್ನೆಲೆಯಲ್ಲಿ ವಿಜೇತ ಕರ್ನಾಟಕ ತಂಡವನ್ನು ಭವ್ಯವಾಗಿ ಮೆರವಣಿಗೆ ನಡೆಸಿ ಗೌರವಿಸಿ ಸನ್ಮಾನಿಸುವ ಕುರಿತು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ರಕ್ಷಕ ಸಂಘ ಯೋಜನೆ ಸಿದ್ಧಪಡಿಸಿದೆ.

error: Content is protected !!
Scroll to Top