(ನ್ಯೂಸ್ ಕಡಬ) newskadaba.com,ಡಿ.31 : ನವದೆಹಲಿ: ಆರ್ಥಿಕ ವಹಿವಾಟಿಗೆ ಬಳಕೆಯಾಗುವ ಶಾಶ್ವತ ಖಾತೆ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಇದನ್ನು ಡಿಸೆಂಬರ್ 31ರೊಳಗೆ ಮಾಡಿಸದೇ ಇದ್ದರೆ ಮುಂದೆ ತೆರಿಗೆದಾರರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ನೀಡಿರುವ ಕೊನೆಯ ಗಡುವು ಇನ್ನು ಕೆಲವೇ ಗಂಟೆಗಳಲ್ಲಿ ಮುಗಿಯಲಿದೆ.. ಆಧಾರ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಗೆ ಇಂದು ಕೊನೆಯ ದಿನವಾಗಿದೆ.ಆಧಾರ್ ಕಾರ್ಡ್ ಲಿಂಕ್ ಮಾಡದ ಪಾನ್ ಕಾರ್ಡ್ ನಾಳೆಯಿಂದ ನಿಷ್ಕ್ರಿಯಗೊಳ್ಳಲಿದೆ. ಇದು ಮುಂದೆ ತೆರಿಗೆ ಸಂಬಂಧಿತ ಕಾರ್ಯಗಳಿಗೆ ತೊಂದರೆಯಾಗಲಿದೆ.
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವ ಮುಖ್ಯ ಉದ್ದೇಶ ವ್ಯಕ್ತಿಯ ಗುರುತನ್ನು ದೃಢೀಕರಿಸುವುದು ಮತ್ತು ನಕಲಿ ಪಾನ್ ಕಾರ್ಡ್ ನೀಡುವುದನ್ನು ತಡೆಯುವುದಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಪ್ರಕಾರ ನಿರ್ದಿಷ್ಟ ನಮೂನೆ ಮತ್ತು ಕಾರ್ಯವಿಧಾನದ ಮೂಲಕ ಗಡುವಿನೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಇದನ್ನು ಮಾಡಬೇಕಿಲ್ಲ. ಯಾಕೆಂದರೆ ಇದು ಸ್ವಯಂಚಾಲಿತವಾಗಿ ನಡೆಯುತ್ತದೆ.
ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಮುಖ್ಯವಾಗಿ ಮಾನ್ಯವಾದ ಪಾನ್ ಕಾರ್ಡ್, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಬೇಕಾಗುತ್ತದೆ…








