ಸುಳ್ಯದಲ್ಲಿ ಬಿಜೆಪಿಯು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಲಿದೆ ► ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಜಿಲ್ಲೆಯಲ್ಲಿ ಅತೀ ಹೆಚ್ಚಿನ ಅಭಿವೃದ್ಧಿ ಆಗಿರುವುದು ಸುಳ್ಯ ಕ್ಷೇತ್ರದಲ್ಲಾಗಿದೆ. ಶಾಸಕ ಎಸ್‌. ಅಂಗಾರರವರು ಮಾಡಿದ ಅಭಿವೃದ್ಧಿಯೇ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಎಸ್. ಅಂಗಾರರು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಸಮಿತಿ ಸದಸ್ಯ, ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಕೃಷ್ಣ ಶೆಟ್ಟಿ ಕಡಬ ಹೇಳಿದರು.

ಜಿಲ್ಲೆಯ ಅಭಿವೃದ್ಧಿಯನ್ನು ತುಲನೆ ಮಾಡಿದಾಗ ಹೆಚ್ಚಿನ ಅಭಿವೃದ್ಧಿ ಆಗಿರುವುದು ಸುಳ್ಯ ಕ್ಷೇತ್ರದಲ್ಲಾಗಿದೆ. ಕಡಬವನ್ನು ತಾಲೂಕಾಗಿ ಘೋಷಣೆ ಮಾಡಿದ್ದು ಬಿಜೆಪಿ ಸರಕಾರವಾಗಿದೆ‌. ಆದರೂ ಕಾಂಗ್ರೆಸ್ ಮರು ಘೋಷಣೆ ಮಾಡಿ ಯಾವುದೇ ಅನುದಾನ ಬಿಡುಗಡೆ ಮಾಡದೆ ಜನರ ನಿರೀಕ್ಷೆಗಳನ್ನು ಸುಳ್ಳಾಗಿಸಿದೆ. ಬಿಜೆಪಿ‌ ಸರಕಾರ ಬಂದ ತಕ್ಷಣವೇ ಶಾಸಕ ಅಂಗಾರರ ನೇತೃತ್ವದಲ್ಲಿ ಕಡಬ ತಾಲೂಕನ್ನು ಅನುಷ್ಠಾನ ಮಾಡಲಾಗುವುದು. ಕಾಂಗ್ರೆಸ್ ಮುಖಂಡರು ಹತಾಶೆಗೊಂಡು ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿದ್ದು ಎಂದು ಪತ್ರಿಕೆಗಳಲ್ಲಿ ಪ್ರಕಟಣೆ ಕೊಡುವ ಮೂಲಕ ಮತದಾರರ ಹಾದಿ ತಪ್ಪಿಸುತ್ತಿದ್ದಾರೆ‌. ಆದರೆ ಸುಳ್ಯ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಲಿದೆ ಎಂದರು.

Also Read  ಕಡಬ: ಮಾಸ್ಕ್ ಡೇ ಆಚರಣೆ ಮತ್ತು ಜನಜಾಗೃತಿ ಜಾಥಾ

ಪತ್ರಿಕಾಗೋಷ್ಠಿಯಲ್ಲಿ ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಶಕ್ತಿ ಕೇಂದ್ರದ ಪ್ರಮುಖ್ ಎ.ಬಿ.ಮನೋಹರ ರೈ, ಬಿಜೆಪಿ ಕಡಬ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ, ಕಡಬ ಗ್ರಾಮ ಸಮಿತಿಯ ಪ್ರ.ಕಾರ್ಯದರ್ಶಿ ಅಶೋಕ್ ಕುಮಾರ್, ಪ್ರಮುಖರಾದ ಗಿರೀಶ್ ಶೆಟ್ಟಿ, ವೆಂಕಟರಮಣ ರಾವ್ ಮಂಕುಡೆ, ಸಂಜೀವ ನಾಕ್ ಕೋಡಿಂಬಾಳ ಮೊದಲಾದವರು ಉಪಸ್ಥಿತರಿದ್ದರು.

Also Read  ಬಂಟ್ವಾಳ: ಪಣೋಲಿ ಬೈಲು ದೇವಸ್ಥಾನದ ಅರ್ಚಕ ರಮೇಶ್‌ ಮೂಲ್ಯ ನಿಧನ

error: Content is protected !!
Scroll to Top