ಏನೂ ಅಭಿವೃದ್ಧಿ ಮಾಡದೆ ದೇಶದಲ್ಲಿಯೇ ಅಪರೂಪದ ಶಾಸಕರಿದ್ದರೆ ಅಂಗಾರ ಮಾತ್ರ ► ಐದು ಬಾರಿ ಶಾಸಕರಾದರೂ ಅಭಿವೃದ್ಧಿ ಶೂನ್ಯ: ಧನಂಜಯ ಅಡ್ಪಂಗಾಯ ಲೇವಡಿ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.06. ಸತತ ವಿಜಯಿಯಾಗಿ ಕಳೆದ 25 ವರ್ಷಗಳಿಂದ ಸೋಲಿನ ರುಚಿಯನ್ನೇ ಕಾಣದಿದ್ದರೂ, ಏನೂ ಅಭಿವೃದ್ಧಿ ಮಾಡದೆ ಇರುವ ಶಾಸಕರಿದ್ದರೆ ದೇಶದಲ್ಲಿಯೇ ಅಪರೂಪದ ಶಾಸಕ ಸುಳ್ಯದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಸ್.ಅಂಗಾರ ಮಾತ್ರ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಲೇವಡಿ ಮಾಡಿದ್ದಾರೆ.

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಐದು ಬಾರಿ ಚುನಾಯಿತರಾಗಿ ಕಳೆದ ಇಪ್ಪತ್ತೈದು ವರ್ಷಗಳ ಕಾಲ ಶಾಸಕರಾದ ಬಿಜೆಪಿಯ ಎಸ್.ಅಂಗಾರರು ಸುಳ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಮಾಡದೆ ಶಾಸಕರ ಭವನದಲ್ಲಿ ನಿದ್ದೆ ಮಾಡುತ್ತಿದ್ದು, ಅವರಿಗೆ ಮತ್ತೆ ಈ ಬಾರಿ ಬಿಜೆಪಿಯಿಂದ ಟಿಕೆಟ್‌ ಕೊಡಲಾಗಿದೆ. ಸುಳ್ಯದಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡದೆ ಸುಳ್ಯದ ಜನತೆಗೆ ದ್ರೋಹ ಎಸಗಿದ್ದಾರೆ. ಅಂತಹವರಿಗೇ ಪುನಃ ಬಿಜೆಪಿ ಟಿಕೆಟ್ ನೀಡಿರುವುದು ಬಿಜೆಪಿಯ ನಾಯಕರಿಗೆ, ವರಿಷ್ಠರಿಗೆ ಪಶ್ಚಾತಾಪವಾಗಿದೆ. ಆದ್ದರಿಂದ ಇನ್ನಾದರೂ ಸುಳ್ಯದ ಜನತೆ ವಿದ್ಯಾವಂತ, ಸುಳ್ಯದ ಅಭಿವೃದ್ಧಿಗೆ ಕೊಡುಗೆಯನ್ನು ಕೊಟ್ಟ ಸಜ್ಜನಿಕೆಗೆ, ಕೆಲಸಗಾರ ಎಂಬ ಹೆಗ್ಗಳಿಕೆಗೆ ಹೆಸರುವಾಸಿಯಾದ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಅವರನ್ನು ಗೆಲ್ಲಿಸಬೇಕು. ಆ ಮೂಲಕ ಸುಳ್ಯದ ಜನತೆ ಅಭಿವೃದ್ಧಿಯನ್ನು ಕಣ್ಣಾರೆ ಕಾಣಬಹುದು ಎಂದರು.

Also Read  ಉಪ್ಪಿನಂಗಡಿ: ರಸ್ತೆ ಕಾಮಗಾರಿ ವೇಳೆ ನೀರಿನ ಪೈಪಿಗೆ ಹಾನಿ ► ವಾರ ಕಳೆದರೂ ಪೈಪ್ ಸರಿಪಡಿಸದಿದ್ದಕ್ಕೆ ಆಕ್ರೋಶಗೊಂಡ ಊರವರಿಂದ ಕಾಮಗಾರಿಗೆ ತಡೆ

ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕಾಮತ್, ಸುಳ್ಯ ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷ ರಾಜಾರಾಂ ಭಟ್, ಪ್ರಮುಖರಾದ ಸುಧೀರ್ ರೈ ಮೇನಾಲ, ಗೀತಾ ಕೋಲ್ಚಾರ್, ತೇಜಕುಮಾರ್ ಬಡ್ಡಡ್ಕ, ತಿರುಮಲೇಶ್ವರಿ, ಅಬೂಬಕ್ಕರ್ ಅಡ್ಕಾರ್, ಜೂಲಿಯಾನ ಕ್ರಾಸ್ತಾ, ವಿಜಯಕೃಷ್ಣ, ವಿಘ್ನೇಶ್ ಮೇದಿನಡ್ಕ, ಸಚಿನ್‌ ರಾಜ್, ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Also Read  ದಕ್ಷಿಣ ಕನ್ನಡ  : ಲೋನ್​ಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಗೋಲ್ ಮಾಲ್ ಆರೋಪ    ➤  ಸಹಕಾರಿ ಸಂಘದ ಸಿಬ್ಬಂದಿಗೆ ಗೂಸಾ ನೀಡಿದ ಗ್ರಾಹಕರು                               

error: Content is protected !!
Scroll to Top