ಬಂಟ್ವಾಳ: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ► ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮೇ.06. ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಶನಿವಾರದಂದು ಬಂಧಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಇಜ್ಜಾ ಗ್ರಾಮದ ಅಗ್ರಹಾರ ನಿವಾಸಿ ಶಶಿಧರ್(19) ಎಂದು ಗುರುತಿಸಲಾಗಿದೆ. ಆರೋಪಿಯು ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಬಾಲಕಿಯ ಷೋಷಕರು ನೀಡಿದ್ದ ದೂರಿನಂತೆ ಬಂಟ್ವಾಳ ಪೊಲೀಸರು ಆರೋಪಿಯನ್ನು ಶನಿವಾರದಂದು ಬಂಧಿಸಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಬಂಟ್ವಾಳ: ಯುವ ವಕೀಲರ ಮೇಲೆ ಪೊಲಿಸ್ ದೌರ್ಜನ್ಯ ➤ ಸುಳ್ಯ ವಕೀಲರ ಸಂಘದಿಂದ ತೀವ್ರ ಖಂಡನೆ

error: Content is protected !!
Scroll to Top