ವೇದ ಅಕಾಡೆಮಿಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ



(ನ್ಯೂಸ್‌ ಕಡಬ) newskadaba.com,ಡಿ.23 ವಿಜಯಪುರ::ನಗರದ ವೇದ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಗಣಿತ ಪ್ರಾತ್ಯಕ್ಷಿಕೆಗಳ ಮೂಲಕ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಭಾರತದ ಸಾರ್ವಕಾಲಿಕ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಗಣಿತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಹಾಗೂ ಗಣಿತ ಪ್ರಾತ್ಯಕ್ಷಿಕಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.





ವಿದ್ಯಾರ್ಥಿಗಳು ಜನ್ಮ ದಿನಾಂಕದ ಮೂಲಕ ಜನ್ಮ ದಿನವನ್ನು ಕಂಡು ಹಿಡಿಯುವ ಸೂತ್ರ, ಮನಸ್ಸಿನಲ್ಲಿ ಅಂದುಕೊAಡ ಒಂದು ಅಂಕಿಯನ್ನು ಗುರುತಿಸಿ ಹೇಳುವ ಹಾಗೂ ಒಂಭತ್ತನೆ ತರಗತಿಯಲ್ಲೇ ಟ್ರಿಗ್ನಾಮೆಟ್ರಿಯ ಕುರಿತು ವಿವರಣೆ ಅದ್ಭುತವಾಗಿತ್ತು. ತನ್ಮೂಲಕ ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದಲ್ಲಿ ಆಸಕ್ತಿಯನ್ನು ಬೆಳೆಸುವುದು ಅದರ ಮುಖ್ಯ ಉದ್ದೇಶವಾಗಿದೆ. ಶ್ರೀನಿವಾಸ ರಾಮಾನುಜನ್ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭವಾದ ರಾಷ್ಟ್ರೀಯ ಗಣಿತ ದಿನಾಚರಣೆಯು ಇಡೀ ಶಾಲೆಯು ಗಣಿತಮಯವಾದಂತೆ ಗೋಚರಿಸಿತು.






ಗಣಿತ ಶಿಕ್ಷಕಿ ಕಾವೇರಿ ಬೊರಗಿ ಅವರು ರಾಷ್ಟ್ರೀಯ ಗಣಿತ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು.
ಗಣಿತ ವಿಭಾಗದ ಮುಖ್ಯಸ್ಥೆ ಮಧು ಕಲ್ಮಠ ಅವರು ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಬಹು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲ ಮಧ್ವಪ್ರಸಾದ ಜಿ.ಕೆ ಅವರು, ಗಣಿತವನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಎಲ್ಲೆಡೆಯೂ ಅದನ್ನು ನೋಡಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಶ್ಮಿ ಕವಟಗಿಮಠ, ಹಿರಿಯ ಗಣಿತ ಶಿಕ್ಷಕ ಈಶ್ವರಪ್ಪ ಹಿಟ್ಟಿನಹಳ್ಳಿ ಅವರು ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!
Scroll to Top