ಅಡ್ಯಾರ್ ಪದವು: ಸಹಾಯ ಕೇಳುವ ನೆಪದಲ್ಲಿ ಚೂರಿ ಇರಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.7. ಪೆಟ್ರೋಲ್ ಕೇಳುವ ನೆಪದಲ್ಲಿ ದುಷ್ಕರ್ಮಿಗಳ ತಂಡವೊಂದು ವಿದ್ಯಾರ್ಥಿಗಳಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಅಡ್ಯಾರ್ ಪದವಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮಂಗಳೂರಿನ ಖಾಸಗಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಕೇರಳದ ಮಲಪ್ಪುರಂ ನಿವಾಸಿ ಸಾಜಿದ್ (23) ಹಾಗೂ ಆತನ ಸ್ನೇಹಿತ ನೌಫಲ್ ನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಅಡ್ಯಾರ್ ಪದವಿನಲ್ಲಿ ಬೈಕ್ ನಲ್ಲಿದ್ದ ಮೂವರ ತಂಡ “ಪೆಟ್ರೋಲ್ ಖಾಲಿಯಾಗಿದ್ದು, ಪೆಟ್ರೋಲ್ ಇದ್ದರೆ ನೀಡಿ” ಎಂದು ಇವರ ಬೈಕನ್ನು ನಿಲ್ಲಿಸಿದೆ. ಸಾಜಿದ್ ಹಾಗೂ ನೌಫಲ್ ಪೆಟ್ರೋಲ್ ನೀಡಲು ಮುಂದಾಗುತ್ತಿದ್ದಂತೆ ಇವರ ಮೇಲೆ ದಾಳಿ ನಡೆಸಿದ ತಂಡ ಪರಾರಿಯಾಗಿದೆ. ಘಟನೆಯಿಂದ ಸಾಜಿದ್ ನ ಕೈ ಹಾಗೂ ಹೊಟ್ಟೆಯ ಬಲಭಾಗಕ್ಕೆ ತೀವ್ರ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ರಾಜ್ಯದಲ್ಲಿ 14 ಲಕ್ಷ ಮಂದಿಯ ಪಡಿತರ ಕಾರ್ಡ್​ ರದ್ದು

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ.

error: Content is protected !!
Scroll to Top