ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಟಿಕೆಟ್‌ ಪರಿಶೀಲನೆ ಕಾರ್ಯಾಚರಣೆ ಜೋರು



(ನ್ಯೂಸ್‌ ಕಡಬ) newskadaba.com,ಡಿ.16 ಬೆಂಗಳೂರು: ನೈಋುತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್‌ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಟಿಕೆಟ್‌ ರಹಿತ ಮತ್ತು ಅಕ್ರಮ ಪ್ರಯಾಣ ಪ್ರಕರಣಗಳು ಗಣನೀಯವಾಗಿ ಪತ್ತೆಯಾಗಿದ್ದು, ರೈಲ್ವೆ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ.





ನೈಋುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಹೆಚ್ಚಿದ ಆದಾಯ

2025-26ರ ಪ್ರಸಕ್ತ ಆರ್ಥಿಕ ವರ್ಷದ ನವೆಂಬರ್‌ ತಿಂಗಳಲ್ಲಿಒಟ್ಟು 67,000 ಟಿಕೆಟ್‌ ತಪಾಸಣಾ ಪ್ರಕರಣಗಳನ್ನು ನೈಋುತ್ಯ ರೈಲ್ವೆ ದಾಖಲಿಸಿದ್ದು, ಇದರಿಂದ ಬರೋಬ್ಬರಿ 5.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷದ (ನವೆಂಬರ್‌ 2024) ಇದೇ ಅವಧಿಗೆ ಹೋಲಿಸಿದರೆ, ಪ್ರಕರಣಗಳ ಸಂಖ್ಯೆಯಲ್ಲಿ ಶೇ. 24ರಷ್ಟು ಮತ್ತು ಆದಾಯದಲ್ಲಿ ಶೇ. 60ರಷ್ಟು ದಾಖಲೆಯ ಏರಿಕೆ ಕಂಡು ಬಂದಿದೆ. 2024ರ ನವೆಂಬರ್‌ನಲ್ಲಿ 54,000 ಪ್ರಕರಣಗಳಿಂದ 3.35 ಕೋಟಿ ರೂ. ಸಂಗ್ರಹವಾಗಿತ್ತು.






 

2025ರ ಏ.1 ರಿಂದ ನ.30ರವರೆಗಿನ ಸಂಚಿತ ಅವಧಿಯಲ್ಲಿ ನೈಋುತ್ಯ ರೈಲ್ವೆ 5.57 ಲಕ್ಷ ಟಿಕೆಟ್‌ ತಪಾಸಣಾ ಪ್ರಕರಣಗಳನ್ನು ಪತ್ತೆ ಮಾಡಿದೆ. ಈ ಮೂಲಕ ಒಟ್ಟು 45.89 ಕೋಟಿ ರೂ. ಆದಾಯ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದ (2024-25) ಅನುಗುಣವಾದ ಅವಧಿಯಲ್ಲಿ 4.8 ಲಕ್ಷ ಪ್ರಕರಣಗಳಿಂದ 32.87 ಕೋಟಿ ರೂ. ಆದಾಯವಿತ್ತು. ಇದರರ್ಥ, ಈ ಅವಧಿಯಲ್ಲಿ ಪ್ರಕರಣಗಳಲ್ಲಿ ಶೇ. 16ರಷ್ಟು ಮತ್ತು ಆದಾಯದಲ್ಲಿ ಶೇ. 40ರಷ್ಟು ಪ್ರಗತಿ ಸಾಧಿಸಿದಂತಾಗಿದೆ.

error: Content is protected !!
Scroll to Top