ವಾಯವ್ಯ ಸಾರಿಗೆಗೆ ಎಲೆಕ್ಟ್ರಿಕ್‌ ಬಸ್‌ಗಳ ಬೇಡಿಕೆ: 507 ಕೋಟಿ ರೂ ವೆಚ್ಚದ ಸಾವಿರ ಬಸ್‌ಗಳಿಗೆ ಪ್ರಸ್ತಾವನೆ



(ನ್ಯೂಸ್‌ ಕಡಬ) newskadaba.com ಡಿ.12 ಹುಬ್ಬಳ್ಳಿ: ಶಕ್ತಿ ಮತ್ತು ಶಕ್ತಿಯೇತರ ಸಾರಿಗೆಯಲ್ಲಿ ತನ್ನದೇ ಆದ ಹೆಸರು ಮಾಡಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ(ವಾಕರಸಾ)ಸಂಸ್ಥೆಯು, ಸಾರ್ವಜನಿಕರಿಗೆ ಇನ್ನಷ್ಟು ಸಾರಿಗೆ ವ್ಯವಸ್ಥೆ ಕಲ್ಪಿಸಲು ಒಂದು ಸಾವಿರ ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಮುಂದಾಗಿದೆ.





ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆ ಆರಂಭವಾದ ಬಳಿಕ ಪ್ರಯಾಣಿಕರ ಸಂಖ್ಯೆಯು ನಿರೀಕ್ಷೆಗೂ ಮೀರಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸರಕಾರ ಈಗಾಗಲೇ 700 ಬಸ್‌ಗಳನ್ನು ಪೂರೈಸಿದೆ. ಇದಲ್ಲದೇ ಪ್ರಧಾನ ಮಂತ್ರಿ ಇ-ಬಸ್‌ ಸೇವಾ ಯೋಜನೆಯಡಿ 200 ಎಲೆಕ್ಟ್ರಿಕ್‌ ಬಸ್‌ಗಳು ಇನ್ನಷ್ಟೇ ಸಂಸ್ಥೆಗೆ ಸೇರ್ಪಡೆಯಾಗಲಿವೆ.






ವಿಶ್ವಬ್ಯಾಂಕ್‌ ನೆರವು

ಕರ್ನಾಟಕ ಎಲೆಕ್ಟ್ರಿಕ್‌ ಬಸ್‌ ಪ್ರೋಗ್ರಾಂ(ಕೆಇಬಿಪಿ)ಅಡಿಯಲ್ಲಿ ರಾಜ್ಯ ಸರಕಾರ ಬೇಡಿಕೆ ಸಲ್ಲಿಸುವಂತೆ ನೀಡಿದ ನಿರ್ದೇಶನ ಹಿನ್ನೆಲೆಯಲ್ಲಿ ವಾರಕಸಾ ಸಂಸ್ಥೆಯು ಕಳೆದ ವಾರ 507.06 ಕೋಟಿ ರೂ.ವೆಚ್ಚದ ಪ್ರಸ್ತಾವನೆ ಸಲ್ಲಿಸಿದೆ.

ಸಾವಿರ ಎಲೆಕ್ಟ್ರಿಕ್‌ ಬಸ್‌ಗಳ ಯೋಜನೆಯು ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಎಲ್ಲಾ ಪ್ರಕ್ರಿಯೆಗಳು ಆರಂಭವಾಗಬೇಕು. ವಿಶ್ವಬ್ಯಾಂಕ್‌ ಮತ್ತು ಎಲೆಕ್ಟ್ರಿಕ್‌ ಬಸ್‌ಗಳ ಹೊಂದಲು ಬೇಕಾಗುವ ಸೌಲಭ್ಯಗಳು, ಮಾರ್ಗಸೂಚಿ, ಮಾನದಂಡಗಳು ಏನಿವೆ ಎಂಬುದು ಇನ್ನುವರೆಗೂ ಗೊತ್ತಾಗಿಲ್ಲ. ಸರಕಾರದ ನಿರ್ದೇಶನದಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಂಸ್ಥೆಯ ಎಂಡಿ ಪ್ರಿಯಾಂಗಾ ಎಂ. ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

error: Content is protected !!
Scroll to Top