(ನ್ಯೂಸ್ ಕಡಬ) newskadaba.com, ಡಿ.02 : ಭಾರತ ಸರ್ಕಾರವು ದೇಶದ ಹಿರಿಯ ನಾಗರಿಕರ ವೃದ್ಧಾಪ್ಯದ ಜೀವನವನ್ನು ಆರ್ಥಿಕವಾಗಿ ಸುರಕ್ಷಿತಗೊಳಿಸಲು ಮಹತ್ವಪೂರ್ಣ ಹೆಜ್ಜೆಯನ್ನಿಟ್ಟಿದೆ. ಈ ದಿಸೆಯಲ್ಲಿ ಕೇಂದ್ರ ಸರ್ಕಾರವು ಜೂನ್ 2025 ರಿಂದ ‘ಯುನಿಫೈಡ್ ಪಿಂಚಣಿ ಯೋಜನೆ 2025’ ಆರಂಭಿಸಿದ್ದು, ದೇಶದ ಕೋಟ್ಯಂತರ ವಯೋವೃದ್ಧರ ಜೀವನದಲ್ಲಿ ಬದಲಾವಣೆ ತರಲಿದೆ.ಈ ಯೋಜನೆಯಡಿ ಪ್ರತಿಯೊಬ್ಬ ಅರ್ಹ ವೃದ್ಧ ನಾಗರಿಕರಿಗೆ ತಿಂಗಳಿಗೆ ರೂ. 10,000 ಧನಸಹಾಯ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
ಅರ್ಹತಾ ಮಾನದಂಡಗಳು
- ಭಾರತೀಯ ನಿವಾಸಿಯಾಗಿರಬೇಕು.
- ಕನಿಷ್ಠ ವಯಸ್ಸು 60 ವರ್ಷವಾಗಿರಬೇಕು.
- ವಾರ್ಷಿಕ ಆದಾಯ ರೂ. 50,000 ಕ್ಕಿಂತ ಕಡಿಮೆ ಇರಬೇಕು.
- ಒಟ್ಟು ಆಸ್ತಿ ಮೌಲ್ಯ ರೂ.10 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಈಗಾಗಲೇ ಯಾವುದೇ ಸರ್ಕಾರದ ವೃದ್ದಾಪ್ಯ ವೇತನ ಯೋಜನೆಗೆ ಸೇರಿರಬಾರದು.
ಅರ್ಜಿಗೆ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ವಿಳಾಸ ಪುರಾವೆ (ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್)
- ವಯಸ್ಸಿನ ದೃಢೀಕರಣ (ಜನನ ಪ್ರಮಾಣಪತ್ರ ಅಥವಾ ಮತದಾರರ ಚೀಟಿ)
- ಬ್ಯಾಂಕ್ ಖಾತೆ ವಿವರಗಳು
ದಾಖಲೆಗಳ ಪರಿಶೀಲನೆ ಕೇವಲ 15 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ, ನಂತರ ಒಂದು ತಿಂಗಳೊಳಗೆ ಪಿಂಚಣಿ ಅನುಮೋದನೆಯನ್ನು ಪಡೆಯಬಹುದು. ಅನುಮೋದನೆಯಾದ ಬಳಿಕ ಮುಂದಿನ ತಿಂಗಳಿನಿಂದಲೇ ಅರ್ಜಿದಾರರ ಖಾತೆಗೆ ರೂ. 10,000 ವೃದ್ದಾಪ್ಯ ವೇತನ ಮೊತ್ತ ಜಮೆಯಾಗುತ್ತದೆ.








