ಸವಣೂರು: ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಮತಯಾಚನೆ

(ನ್ಯೂಸ್ ಕಡಬ) newskadaba.com ಸವಣೂರು, ಮೇ.4. ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಅವರು ಸವಣೂರು ಪರಿಸರದಲ್ಲಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಂದಾಳು ಜಿ.ಪಂ. ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ತಾ.ಪಂ. ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಆರ್ತಿಕೆರೆ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುದರ್ಶನ್ ನಾೈಕ್ ಕಂಪ, ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಕರುಣಾಕರ ಗೌಡ ಬೀರುಸಾಗು, ಯತೀಂದ್ರ ಶೆಟ್ಟಿ ಮಠ, ಜಯಾನಂದ ಕೆಡೆಂಜಿ, ಅಬ್ದುಲ್ಲಾ ಗುಂಡಿಲ,ಇಸ್ಮಾಯಿಲ್ ಮಾಂತೂರು, ಜುಬೈರ್ ಮಾತೂರು ಮೊದಲಾದವರು ಉಪಸ್ಥಿತರಿದ್ದರು.

ನಾಣಿಲದಲ್ಲಿ ಕಾರ್ಯಕರ್ತರ ಸಭೆ
ಚಾರ್ವಾಕ ಗ್ರಾಮದ ನಾಣಿಲ ಬೂತ್ ಕಾರ್ಯಕರ್ತರ ಸಭೆಯು ಮಾಚಿಲ ಬೆಳಿಯಪ್ಪ ಅವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಅವರು ಮಾತನಾಡಿ, ಕಳೆದ ಬಾರಿ ಅತೀ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದೇನೆ.ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಚಿವರು ಹಾಗೂ ಶಾಸಕರು ,ನಾಯಕರ ಸಹಕಾರ ಪಡೆದುಕೊಂಡು ಕ್ಷೇತ್ರದಲ್ಲಿ ಸುಮಾರು 35 ಕೋಟಿ ರೂ ವೆಚ್ಚದ ಕಾಮಗಾರಿ ನಡೆಸಲಾಗಿದೆ.ಕ್ಷೇತ್ರದ ಅಭಿವೃದ್ದಿ ದೃಷ್ಟಿಯಿಂದ ಈ ಬಾರಿ ಶಾಸಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

Also Read  ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ➤ ಹಲವರು ಗಂಭೀರ

ಸಭೆಯಲ್ಲಿ ಮಂಗಳೂರು ವಿ.ವಿ.ಸಿಂಡಿಕೇಟ್ ಸದಸ್ಯ ವಿಜಯ ಕುಮಾರ್ ಸೊರಕೆ,ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ತಾ.ಪಂ. ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಆರ್ತಿಕೆರೆ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುದರ್ಶನ್ ನಾೈಕ್ ಕಂಪ, ಬೆಳಂದೂರು ವಲಯ ಉಸ್ತುವಾರಿ ಎ.ಪಿ.ಮೋಹನ ಅರುವ, ಭಾಗೀರಥಿ ಕುಂಬ್ಲಾಡಿ, ಕಾಣಿಯೂರು ಗ್ರಾ.ಪಂ. ಮಾಜಿ ಸದಸ್ಯರಾದ ಪಾರ್ವತಿ ಅಂಬುಲ, ಚೀಂಕ್ರ ಓಡದಕರೆ, ದಿನೇಶ್ ಇಡ್ಯಡ್ಕ, ನೇಮಣ್ಣ ಅಂಬುಲ, ಮಾರಪ್ಪ ಶೆಟ್ಟಿ, ದೇವಣ್ಣ ಅಂಬುಲ, ಬೆಳಿಯಪ್ಪ ಮಾಚಿಲ, ಗಂಗಾಧರ ಅರುವ ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಸವಣೂರು: ಶಾಸಕ ಅಂಗಾರರ ಕಾರ್ಯವೈಖರಿಗೆ ಬೇಸತ್ತ ಬಿಜೆಪಿ ಕಾರ್ಯಕರ್ತರು ► ಜಿ.ಪಂ.ಮಾಜಿ ಸದಸ್ಯರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ

error: Content is protected !!
Scroll to Top