ಕಡಬ ಜೆ ಎಂ ಜೆ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ



(ನ್ಯೂಸ್ಕಡಬ) newskadaba.com,  ಡಿ.01 : ಕಡಬ ಜೆ ಎಂ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನದ ಸಂದರ್ಭದಲ್ಲಿ ಜಾಗೃತಿ – ಜವಾಬ್ದಾರಿ – ಪ್ರಾರ್ಥನೆ ಎಂಬ ತತ್ತ್ವದೊಂದಿಗೆ ಮುಂಜಾಗ್ರತಾ ಕಾರ್ಯಕ್ರಮ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆಸಲಾಯಿತು.





ಎಚ್‌ಐವಿ/ಎಯ್ಡ್ಸ್ ವಿರುದ್ಧದ ಹೋರಾಟದಲ್ಲಿ ಭಯಕ್ಕಿಂತ ಮಾಹಿತಿ,ತಪ್ಪು ಕಲ್ಪನೆಗಿಂತ ಸತ್ಯ,ವೈಷಮ್ಯಕ್ಕಿಂತ ಸ್ನೇಹ ಮತ್ತು  ಬೆಂಬಲ ಎಂದಿಗೂ ದೊಡ್ಡ ಶಸ್ತ್ರಗಳಾಗಿವೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು…“ನಾವು ತಿಳಿದುಕೊಂಡಾಗ ಬದುಕು ಬದಲಾಗುತ್ತದೆ, ನಾವು ಜಾಗೃತಿಯಾದಾಗ ಸಮಾಜ ಬಲವಾಗುತ್ತದೆ.” ….






“ರೋಗಕ್ಕಿಂತ ದೊಡ್ಡದು ಮಾನವೀಯತೆ,ನೋವಿಗಿಂತ ದೊಡ್ಡದು ನಮ್ಮ ಸಹಾನುಭೂತಿ,ವೈಷಮ್ಯಕ್ಕಿಂತ ದೊಡ್ಡದು ನಮ್ಮ ಒಕ್ಕೂಟ”ಎಂಬುದು ಈ ದಿನದ ಸಂದೇಶವಾಗಿದೆ..

ಎಯ್ಡ್ಸ್ ಬಗ್ಗೆ ಜಾಗೃತಿ ಹರಡುವುದು ಪ್ರತಿಯೊಬ್ಬರ ಕರ್ತವ್ಯ ಎಂಬ ಭಾವನೆ ಜೊತೆಗೆ ಎಲ್ಲರೂ ಒಂದಾಗಿ ಪ್ರಾರ್ಥನೆ ಸಲ್ಲಿಸಲಾಯಿತು…

error: Content is protected !!
Scroll to Top