(ನ್ಯೂಸ್ ಕಡಬ) newskadaba.com ಸವಣೂರು, ಮೇ.4. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯಕ್ಕೆ ಶೇ.94 ಫಲಿತಾಂಶ ಬಂದಿದೆ.ವಿಜ್ಞಾನ ವಿಭಾಗದ 38 ವಿದ್ಯಾರ್ಥಿಗಳಲ್ಲಿ 4 ವಿಶಿಷ್ಟ ಶ್ರೇಣಿ, 26 ಪ್ರಥಮ ದರ್ಜೆ ಮತ್ತು 5 ದ್ವಿತೀಯ ದರ್ಜೆಗಳೊಂದಿಗೆ , ವಾಣಿಜ್ಯಶಾಸ್ತ್ರ ವಿಭಾಗದ 37 ವಿದ್ಯಾರ್ಥಿಗಳಲ್ಲಿ 5 ವಿಶಿಷ್ಟ ಶ್ರೇಣಿ, 24 ಪ್ರಥಮ ದರ್ಜೆ ಮತ್ತು 3 ದ್ವಿತೀಯ ದರ್ಜೆಗಳೊಂದಿಗೆ ತೇರ್ಗಡೆಹೊಂದಿ ಕಾಲೇಜಿಗೆ ಶೇ94 ಫಲಿತಾಂಶ ದಾಖಲಾಗಿದೆ
ವಾಣಿಜ್ಯ ವಿಭಾಗದಲ್ಲಿ ಪ್ರಿಯಾ ಎಸ್.ಎಂ (548), ದಕ್ಷಾ ಶೆಟ್ಟಿ (548), ಸ್ವಾತಿ ಎಚ್ (536), ಪ್ರಕೃತಿ (535), ಆಯಿಶತ್ ತ್ವಾಹಿರಾ(522) , ವಿಜ್ಞಾನ ವಿಭಾಗದಲ್ಲಿ ನಬೀಲಾ(545), ಶಿವನಿಂಗಪ್ಪ ತಲ್ವಾರ್(539), ರಿತಿಕ್ ಸುನಾಧೋಲಿ (534), ಮನೋಜ್ ಕೆ.ಎಸ್(520) ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಪ್ರಿಯಾ ಎಸ್.ಎಂ, ದಕ್ಷಾ ಶೆಟ್ಟಿ ಕಾಲೇಜಿಗೆ ಪ್ರಥಮ
548 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಪ್ರಿಯಾ ಎಸ್.ಎಂ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂದಲೆ ಗ್ರಾಮದ ಶಿವಯೋಗಿಪುರ ಮಲ್ಲಿಕಾರ್ಜುನ ಎಸ್.ಎ0 ಹಾಗೂ ಪಾಲ್ತಾಡಿ ಗ್ರಾಮದ ಮಂಜುನಾಥನಗರ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ಕುಸುಮಾ ಐ.ಟಿ ಅವರ ಪುತ್ರಿ, ದಕ್ಷಾ ಶೆಟ್ಟಿ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಕೆಡೆ0ಜಿ ವಿಠಲ ಶೆಟ್ಟಿ ಹಾಗೂ ಸವಣೂರು ಗ್ರಾ.ಪಂ.ಸದಸ್ಯೆ ರಾಜೀವಿ ಶೆಟ್ಟಿಯವರ ಪುತ್ರಿ.