ದೋಳ್ಪಾಡಿ: ಕಾಂಗ್ರೆಸ್ ಕಾರ್ಯಕರ್ತರ ಸಭೆ

(ನ್ಯೂಸ್ ಕಡಬ) newskadaba.com  ಸವಣೂರು, ಮೇ.4. ಈ ಬಾರಿ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸಲಿದೆ.ಸುಳ್ಯ ಕ್ಷೇತ್ರದಲ್ಲೂ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗಲಿದ್ದು ಆ ಮೂಲಕ ಡಾ.ರಘು ಅವರು ವಿಧಾನಸಭೆ ಪ್ರವೇಶಿಸಲಿದ್ದಾರೆ.ಕಾಂಗ್ರೆಸ್ ಗೆಲುವು ಅಭಿವೃದ್ದಿಗೆ ಪೂರಕ ಎಂದು ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ ಹೇಳಿದರು.

ಅವರು ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಪರ ದೋಳ್ಪಾಡಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸರಕಾರ ಸಮಾಜದ ಎಲ್ಲರ ಹಿತ ಕಾದಿದೆ. ಸರ್ವರನ್ನೂ ಸಮಾನ ರೀತಿಯಲ್ಲಿ ಕಂಡಿದ್ದು ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

Also Read  ಉಡುಪಿ: ಪೆಂಡಾಲ್ ಸಾಗಾಟದ ಲಾರಿ ಪಲ್ಟಿ - ಮೂವರು ಮೃತ್ಯು ► ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಪೆಂಡಾಲ್ ಸಾಗಿಸುತ್ತಿದ್ದ ಲಾರಿ

ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಬೆಳಂದೂರು ವಲಯ ಉಸ್ತುವಾರಿ ಎ.ಪಿ.ಮೋಹನ ಅರುವ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುದರ್ಶನ್ ಕಂಪ ,ವಿಶ್ವನಾಥ ಮಾರ್ಕಜೆ, ದಿನೇಶ್ ಇಡ್ಯಡ್ಕ, ಮಾರಪ್ಪ ಶೆಟ್ಟಿ , ವಿಶ್ವನಾಥ ಮಾಳ ಕಾಣಿಯೂರು, ಹರೀಂದ್ರನಾಥ ರೈ, ಕೆಂಚಪ್ಪ ವಾಳ್ತಾಜೆ, ವೆಂಕಟರಮಣ ಕೆ.ವಿ, ವೆಂಕಟರಮಣ ದೋಳ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

 

error: Content is protected !!
Scroll to Top