ಕಾಣಿಯೂರು ಮಠದಲ್ಲಿ ಶ್ರೀ ನರಸಿಂಹ ಜಯಂತಿ

(ನ್ಯೂಸ್ ಕಡಬ) newskadaba.com ಸವಣೂರು, ಮೇ.4: ಅಷ್ಟ ಮಠಗಳಲ್ಲಿ ಒಂದಾದ ಕಾಣಿಯೂರು ಮೂಲ ಮಠದ ಶ್ರೀರಾಮ ತೀರ್ಥ ಮಠದಲ್ಲಿ ಶ್ರೀ ನರಸಿಂಹ ಜಯಂತ್ಯುತ್ಸವವು ನಡೆಯಿತು.

ಶ್ರೀ ನರಸಿಂಹ ಜಯಂತಿಯ ಅಂಗವಾಗಿ ವಿಷ್ಣುಪ್ರಿಯಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ, ಶ್ರೀ ಕಾಣಿಯೂರು ಮಠದ ಸಂಸ್ಥಾನ ದೇವರ ಪೂಜೆ, ಮಹಾಪೂಜೆ ನಡೆದ ಬಳಿಕ ಪುತ್ತೂರು ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರಿಂದ ಮಾಗಧ ವಧೆ ಯಕ್ಷಗಾನ ತಾಳಮದ್ದಳೆ ನಡೆಯಿತು. ನಂತರ ಮಧ್ಯಾಹ್ನ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀ ಪಾದಂಗಳವರಿಂದ ಫಲ ಮಂತ್ರಾಕ್ಷತೆ ನಡೆದು, ಅನ್ನಸಂತರ್ಪಣೆ ನಡೆಯಿತು. ಮಠದ ವ್ಯವಸ್ಥಾಪಕ ನಿರಂಜನ್ ಆಚಾರ್ ಸ್ವಾಗತಿಸಿ, ವಂದಿಸಿದರು.

Also Read  ಯುವತಿ ಸ್ನಾನ ಮಾಡುತ್ತಿದ್ದ ವೇಳೆ ವಿಡಿಯೋ ಮಾಡಿದ ಅಪರಿಚಿತ

error: Content is protected !!
Scroll to Top