ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ



(ನ್ಯೂಸ್‌ ಕಡಬ) newskadaba.com,  ನ.26 ಬೆಂಗಳೂರು: ಮೊದಲೇ ತರಕಾರಿ ಬೆಲೆ ಹೆಚ್ಚಾಗಿದ್ದು,ಇದರ ನಡುವೆ ಮೊಟ್ಟೆ ಬೆಲೆಯೂ ಹೆಚ್ಚಾಗುತ್ತಿರುವುದು ಸಾಮಾನ್ಯ ಜನರ ಮೇಲೆ ತೀವ್ರ ಪ್ರಭಾವವನ್ನು ಉಂಟು ಮಾಡುತ್ತಿದೆ. ಮೀನು ಮಟನ್ ಚಿಕನ್ ಗಿಂತ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ವಸ್ತು ಎಂದರೆ ಅದು ಮೊಟ್ಟೆ ಇದೀಗ ಬಡವರು ದುಬಾರಿ ಮೊಟ್ಟೆ ಖರೀದಿಸಿ ತಿನ್ನುವುದು ಕಷ್ಟವಾಗಿ ಬಿಟ್ಟಿದೆ.





ಉತ್ಪಾದನೆಯಲ್ಲಿ ಶೇ,10 ರಷ್ಟು ಕಡಿಮೆಯಾಗಿರುವ ಕಾರಣ ಮತ್ತು ದುಬೈ ಏಪ್ರಿಕ ಶ್ರೀಲಂಕಾ ಹಾಗೂ ಓಮನ್ ದೇಶಗಳಿಗೆ ದಿನಕ್ಕೆ ಅಂದಾಜು 50 60 ಲಕ್ಷ ಮೊಟ್ಟೆ ರಫ್ತುಗು ತ್ತಿದೆ. ಈ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಸದ್ಯ ತರಕಾರಿ ಬೆಲೆಯೂ ಹೆಚ್ಚಳವಾಗುತ್ತಿದ್ದು, ಇದರ ನಡುವೆ ಮೊಟ್ಟೆ ಬೆಲೆಯೂ ಹೆಚ್ಚಾಗುತ್ತಿರುವುದು ಸಾಮಾನ್ಯ ಜನರ ಮೇಲೆ ತೀವ್ರ ಪ್ರಭಾವವನ್ನು ಉಂಟು ಮಾಡುತ್ತಿದೆ.ಸಾಮಾನ್ಯ ಜನರಿಗೆ ಎಂದು ಕೈಗೆಟುಕುವ ಬೆಲೆಯಲ್ಲಿ ಸಿಗುವ ವಸ್ತು ಎಂದರೆ ಅದು ಮೊಟ್ಟೆಯೊಂದೆ. ಹೆಚ್ಚು ಎಂದರೆ ಮೊಟ್ಟೆ ಬೆಲೆ 6 ರಿಂದ 6.50 ರೂ ಇರುತ್ತೆ. ಈ ಕಾರಣ ದಿಂದಲೇ ನೂರಾರು ರೂಪಾಯಿ ಕೊಟ್ಟು ಮಾಂಸ ಖರೀದಿ ಮಾಡುವ ಬದಲು ಹಲವರು ಮೊಟ್ಟೆ ಖರೀದಿ ಮಾಡುತ್ತಾರೆ.ಆದರೆ ಈಗ ಸಾಮಾನ್ಯರ ಖರೀದಿ ಮಾಡಲು ಕಷ್ಟವಾಗುವ ಮೊತ್ತಕ್ಕೆ ಬೆಲೆ ಏರಿಕೆ ಆಗ್ತಿದೆ.






ಕಳೆದ ಎರಡು ವಾರದ ಹಿಂದೆ ಎನ್ ಇ ಸಿಸಿ ಸಗಟು ಬೆಲೆ 100 ಕ್ಕೆ 575 ರು. ಇದ್ದ ಬೆಲೆ ಇದೀಗ 675 ರೂ. ಆಗಿದೆ 12 ಕ್ಕೆ 70 ರು ಇದ್ದ ಬೆಲೆ 84 ರು. ಗೆ ಏರಿಕೆಯಾಗಿದೆ. ಚಿಲ್ಲಿರೆ ದರದಲ್ಲಿ 1 ಮೊಟ್ಟೆಗೆ 7 ರು ಗಡಿ ದಾಟುತ್ತಿದ್ದು, 7.50 ರು. ನಿಂದ 8 ರು. ವರೆಗೆ ಮಾರಾಟ ವಾಗುತ್ತಿದೆ. ಹೀಗಾಗಿ ಜನ ಸಾಮಾನ್ಯರಿಗೆ ಬಿಗ್ ಶಾಕ್ ಎದುರಾಗುತ್ತಿದೆ….

error: Content is protected !!
Scroll to Top