ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ



(ನ್ಯೂಸ್‌ ಕಡಬ) newskadaba.com,  ನ.26  ಬೆಂಗಳೂರು: ಡಾಲರ್ ಮೌಲ್ಯದ ಕುಸಿತ, ಬೇಡಿಕೆ ಹೆಚ್ಚಳವಾಗುತ್ತಿರುವುದು ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳ ಬೆಲೆ ಪ್ರಭಾವದಿಂದಾಗಿ ಚಿನ್ನದ ಬೆಲೆ ಭಾರೀ ಹೆಚ್ಚಳ ಕಾಣುತ್ತಿದೆ. ನಿನ್ನೆ ಬರೋಬ್ಬರಿ 1919 ರೂ ಹೆಚ್ಚಳ ಕಂಡಿದ್ದ ಬೆಲೆ ಇಂದೂ ಕೂಡಾ 870 ರೂಪಾಯಿಗೆ ಏರಿಕೆ ಕಂಡಿದೆ.





ನವೆಂಬರ್ 26 ಬುಧವಾರದಂದು, ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,791 ರೂಪಾಯಿ ಇದ್ದು, ಇಂದು 87 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,27,910 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 870 ರೂ ಏರಿಕೆ ಆಗಿದೆ.






22 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ 1 ಗ್ರಾಂ ಬೆಲೆ 11,725 ರೂಪಾಯಿ ಇದ್ದು, ಇಂದು 80 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,17,250 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 800 ರೂ ಏರಿಕೆ ಆಗಿದೆ.

 

ಬೆಂಗಳೂರಿನ ಚಿನ್ನ-ಬೆಳ್ಳಿ ದರ

ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,791 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,27,910 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.

error: Content is protected !!
Scroll to Top