ಭ್ರಷ್ಟಾಚಾರ ಮಾಡಿ ಬಂದವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ ► ಕಡಬದಲ್ಲಿ ನಡೆದ ಜೆಡಿಎಸ್ – ಬಿಎಸ್ಪಿ ಸಭೆಯಲ್ಲಿ ಬಿಎಸ್ಪಿ ಅಭ್ಯರ್ಥಿ ರಘು ಧರ್ಮಸೇನಾ

(ನ್ಯೂಸ್ ಕಡಬ) newskadaba.com ಕಡಬ, ಮೇ.04. ಭ್ರಷ್ಟಾಚಾರ ಮಾಡಿ ಬಂದವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ರಘು ಧರ್ಮಸೇನಾ ಹೇಳಿದರು.

ಅವರು ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಡಬದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶುಕ್ರವಾರ ಅಪರಾಹ್ನ ನಡೆದ ಜಾತ್ಯತೀತ ಜನತಾದಳ ಹಾಗೂ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ರಾಷ್ಟ್ರೀಯ ಪಕ್ಷಗಳು ಜನರನ್ನು ವಿವಿಧ ಆಮಿಷಗಳ ಮೂಲಕ ಹಾದಿ ತಪ್ಪಿಸಲು ಯತ್ನಿಸುತ್ತಿದೆ‌. ಜನರು ಯಾವುದೇ ಆಮಿಷಗಳಿಗೆ ಒಳಪಡದೆ ಹೆಚ್ಚಿನ ಮತಗಳ ಮೂಲಕ ಗೆಲ್ಲಿಸಿಕೊಡಬೇಕಾಗಿ ವಿನಂತಿಸಿದರು. ಸಭಾಧ್ಯಕ್ಷತೆಯನ್ನು ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಜಾಕೆ ಮಾಧವ ಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ
ಎಂ.ಬಿ.ಸದಾಶಿವ, ಬಿಎಸ್ಪಿ ದ.ಕ.ಜಿಲ್ಲಾಧ್ಯಕ್ಷ ಗಣೇಶ್, ಜೆಡಿಎಸ್ ಕಡಬ ತಾಲೂಕು ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್, ಗಣಪಯ್ಯ ಗೌಡ, ಜಿಲ್ಲಾ ಕಾರ್ಯದರ್ಶಿ ಉತ್ತಮನ್ ಮೊದಲಾದವರು ಉಪಸ್ಥಿತರಿದ್ದರು.

Also Read  ಬಸ್ - ಸ್ಕೂಟರ್ ನಡುವೆ ಢಿಕ್ಕಿ ➤ ಪವಾಡಸದೃಶ ಪಾರಾದ ಯುವತಿಯರು

error: Content is protected !!
Scroll to Top