ಸುಳ್ಯ: ಎಸ್‌ಡಿಪಿಐ ಬೆಂಬಲಿತ ಚುನಾಯಿತ ಪಂಚಾಯತ್ ಸದಸ್ಯರ ವಾರ್ಡ್ ಗಳಿಗೆ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರ ನೇತೃತ್ವದ ನಿಯೋಗ ಭೇಟಿ



(ನ್ಯೂಸ್‌ ಕಡಬ) newskadaba.com,  ನ.25 ಸುಳ್ಯ : ಎಸ್‌ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರನ್ನು ಹೊಂದಿರುವ ವಾರ್ಡ್ ಗಳಲ್ಲಿ ನಡೆಸಿದ ಅಭಿವೃದ್ಧಿ ಯೋಜನೆ, ಕುಂದುಕೊರತೆ, ಹಾಗೂ ಕಾರ್ಯಕರ್ತರು ಮತ್ತು ಚುನಾಯಿತ ಸದಸ್ಯರೊಂದಿಗೆ ಸಮಾಲೋಚನಾ ಸಭೆ ನಡೆಸುವ ಪಕ್ಷದ ತೀರ್ಮಾನದಂತೆ ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಸವಣೂರು, ಮಾಂತೂರು, ಶಾಂತಿ ನಗರ,  ಆತೂರಿನ ಕೊಯಿಲ ವಾರ್ಡ್, ಮಠ ವಾರ್ಡ್ ಗಳಿಗೆ SDPI ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ನೇತೃತ್ವದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.





ಜಿಲ್ಲಾಧ್ಯಕ್ಷರ ನಿಯೋಗವನ್ನು ಸ್ಥಳೀಯ ಚುನಾಯಿತ ಸದಸ್ಯರು ಹಾಗೂ ಕಾರ್ಯಕರ್ತರು ಹೂಗುಚ್ಚ ನೀಡಿ ಸ್ವಾಗತಿಸಿದರು.  ಗ್ರಾ.ಪಂ ಎಸ್‌ಡಿಪಿಐ ಬೆಂಬಲಿತ ಸದಸ್ಯರು ತಮ್ಮ ವಾರ್ಡ್ ನಲ್ಲಿ ನಡೆಸಿದ ಅಭಿವೃದ್ಧಿ ಯೋಜನೆಗಳು, ಪಂಚಾಯತ್ ವತಿಯಿಂದ ಮಾಡಿಸಿದ ಕೆಲಸ ಕಾರ್ಯಗಳ ಬಗ್ಗೆ ನಿಯೋಗಕ್ಕೆ ಮಾಹಿತಿ ನೀಡಿದರು.






ನಿಯೋಗದಲ್ಲಿ ಜಿಲ್ಲಾ ಉಪಾಧ್ಯಕ್ಷರು   ಇನಾಸ್ ರೋಡ್ರಿಗಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ      ಸಿದ್ದೀಕ್ ಪುತ್ತೂರು, ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ, ನ್ಯಾಯವಾದಿ ಕಬೀರ್ ಕೆಮ್ಮಾರ,       ಆನಂದ್ ಮಿತ್ತಬೈಲು, ಸುಳ್ಯ ಕ್ಷೇತ್ರ ಅಧ್ಯಕ್ಷರಾದ ಮಿರಾಝ್ ಸುಳ್ಯ, ಕ್ಷೇತ್ರ ಕಾರ್ಯದರ್ಶಿ ಎಂ ಎಸ್ ರಫೀಕ್, ಷರೀಫ್ ನಿಂತಿಕಲ್, ಹಾರಿಸ್ ಕಡಬ ಉಪಸ್ಥಿತರಿದ್ದರು

error: Content is protected !!
Scroll to Top