ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈಭವದ ಲಕ್ಷ ದೀಪೋತ್ಸವ ಕುಣಿತ ಭಜನೆಗೆ ಹೆಜ್ಜೆ ಹಾಕಿದ ಸಾವಿರಾರು ಭಜಕರು



(ನ್ಯೂಸ್‌ ಕಡಬ) newskadaba.com,  ನ.24: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ನ.19 ರಾತ್ರಿ ವೈಭವದ ಲಕ್ಷದೀಪೋತ್ಸವ ನೆರವೇರಿತು.ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ದೇವಸ್ಥಾನದ ಅರ್ಚಕರು ಉತ್ಸವದ ವಿಧಿ ವಿಧಾನ ನೆರವೇರಿಸಿದರು.ಕುಕ್ಕೆ ಸುಬ್ರಹ್ಮಣ್ಯದ ಹಲವೆಡೆ ಬೆಳಗುದ ಲಕ್ಷ ಹಣತೆ ದೀಪದ ನಡುವೆ ಭಕ್ತರ ಪರಾಕುಗಳೊಂದಿಗೆ ಶ್ರೀ ದೇವರ ಲಕ್ಷದೀಪೋತ್ಸವ ರಥೋತ್ಸವ ನೆರವೇರಿತು





ಇದಕ್ಕೂ ಪೂರ್ವದಲ್ಲಿ ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಂಕೃತ ರಂಗಪೂಜೆ ನಡೆಯಿತು. ಬಳಿಕ ಪ್ರಧಾನ ದೇವಾಲಯದಲ್ಲಿ 16 ಆಕರ್ಷಕ ಸಾಲುದೀಪಗಳ ನಡುವೆ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ಮತ್ತು ವಿವಿಧ ಸಂಗೀತ ವಾದ್ಯಗಳ ಸುತ್ತುಗಳು ನೆರವೇರಿತು.ಹೊರಾಂಗಣ ಉತ್ಸವದ ಬಳಿಕ ರಥಬೀದಿಗೆ ಆಗಮಿಸಿದ ಶ್ರೀ ದೇವರು ಪಂಚ ಶಿಖರಗಳನ್ನಳಗೊಂಡಚಂದ್ರಮಂಡಲ ರಥದಲ್ಲಿ ಆರೂಢರಾಗಿ ಪೂಜೆ ಸ್ವೀಕರಿಸಿದರು.






ಲಕ್ಷದೀಪೋತ್ಸವದ ಅಂಗವಾಗಿ ನೂರಾರು ಭಜನಾ ತಂಡಗಳಿಂದ ಕುಣಿತ ಭಜನೆ ನೆರವೇರಿತು. ಖ್ಯಾತ ಗಾಯಕ ರವೀಂದ್ರ ಪ್ರಭು ಮತ್ತು ತಂಡ ಭಜನೆಗಳನ್ನು ಹಾಡಿದರು. 140 ತಂಡಗಳು ಕುಣಿತ ಭಜನೆಯಲ್ಲಿ ಪಾಲ್ಗೊಂಡರು. ವೈಭವೋಪೇತವಾಗಿ ಕುಣಿತ ಭಜನೆ ನಡೆಯಿತು.ಲಕ್ಷ ದೀಪೋತ್ಸವ ಮತ್ತು ಕುಣಿತ ಭಜನೆ ಕಾರ್ಯಕ್ರಮವನ್ನು ಸುದ್ದಿ ಚಾನೆಲ್ ನೇರ ಪ್ರಸಾರ ಮಾಡಿದ್ದು 22000 ಮಂದಿ ಲೈವ್ ಕಾರ್ಯಕ್ರಮ ವೀಕ್ಷಿಸಿದರು.

error: Content is protected !!
Scroll to Top