(ನ್ಯೂಸ್ ಕಡಬ) newskadaba.com, ನ.24 :ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವವು ನ.16ರಿಂದ ಆರಂಭಗೊಂಡಿದ್ದು, ನ.24 ಕ್ಕೆ ಹೂವಿನ ತೇರು, ನ.25 ಪಂಚಮಿ ತೇರು, ನ.26 ಮಹಾರಥೋತ್ಸವ ನಡೆಯಲಿದೆ.
ನ.16 ಆದಿತ್ಯವಾರ ಕೊಪ್ಪರಿಗೆ ಏರುವ ಮೂಲಕ ಜಾತ್ರೆ ಆರಂಭವಾದ ಜಾತ್ರೆ ನಡೆಯಿತು.ನ.17 ರ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ,ನ.18 ರಾತ್ರಿ ಶೇಷವಾಹನಯುಕ್ತ ಬಂಡಿಉತ್ಸವ ಜರುಗಿತು.
ನ.19ರಂದು ಲಕ್ಷದೀಪೋತ್ಸವ ನಡೆದಿದ್ದು, ನ.20.ಶೇಷ ವಾಹನೋತ್ಸವ, ನ.21.ಅಶ್ವವಾಹ ನೋತ್ಸವ, ನ.22. ಮಯೂರ ವಾಹ ನೋತ್ಸವ, ನ.23. ಶೇಷವಾಹನೋತ್ಸವ ಜರುಗಿತು. ನ.24. ಚೌತಿ ಹೂವಿನ ತೇರಿನ ಉತ್ಸವ, ನ.25 ಪಂಚಮಿಯಂದು ಬೆಳಗ್ಗೆ ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ ಜರುಗಲಿದೆ. ನ.26 ಬುಧವಾರ ಬೆಳಗ್ಗೆ ಶ್ರೀ ದೇವರ ಮಹಾ ರಥೋತ್ಸವ ನೆರವೇರಲಿದೆ. ನ.27ಗ ಬೆಳಗ್ಗೆ ಕುಮಾರಧಾರ *ಪುಣ್ಯತೀರ್ಥದ ಜಳಕದ ಗುಂಡಿಯಲ್ಲಿ ಶ್ರೀ ದೇವರ ಅವಭ್ರತೋತ್ಸವ ಮತ್ತು ನೌಕಾವಿಹಾರ, ಡಿ.2ರಂದು ಮಂಗಳವಾರ ಕೊಪರಿಗೆ ಇಳಿಯುವುದು.








