ಬಿಜೆಪಿ ಪ್ರಣಾಳಿಕೆ ಬಿಡುಗಡೆ ► ರೈತರು, ಮಹಿಳೆಯರಿಗೆ ಹಲವು ಆಶ್ವಾಸನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ‌.04. ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿಯು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರೈತರು, ಮಹಿಳೆಯರಿಗೆ ಹಲವು ಆಶ್ವಾಸನೆಗಳನ್ನು ನೀಡಿದೆ.

ಶುಕ್ರವಾರದಂದು ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ 1 ಲಕ್ಷ ರೂಪಾಯಿವರೆಗಿನ ಕೃಷಿ ಸಾಲ ಮತ್ತು ನೇಕಾರರ 1 ಲಕ್ಷ ರೂಪಾಯಿ ಸಾಲ ಮನ್ನಾ, ವಿವಾಹ ಮಂಗಳ ಯೋಜನೆ ಯಲ್ಲಿ ಬಡ ಯುವತಿಗೆ 25,000 ರೂ ಮತ್ತು 2.5 ಗ್ರಾಂ ಚಿನ್ನಾಭರಣ, ಸ್ತ್ರೀ ಶಕ್ತಿ ಸದಸ್ಯೆಯರಿಗೆ 2 ಲಕ್ಷದ ವರೆಗೆ 1% ಬಡ್ಡಿಯಲ್ಲಿ ಸಾಲ, ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ ಫೋನ್‌, ರೈತರಿಗೆ ವಿದೇಶ ಪ್ರವಾಸ, ಗೋಹತ್ಯೆ ನಿಷೇಧ ಕಾಯ್ದೆಗೆ ಮರು ಚಾಲನೆ, ಎಸಿಬಿ ರದ್ದು ಸೇರಿದಂತೆ ಹಲವು ಆಶ್ವಾಸನೆಗಳನ್ನು ನೀಡಿದೆ.

Also Read  ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಸುರತ್ಕಲ್ ಠಾಣೆಗೆ ವರ್ಗಾವಣೆ

error: Content is protected !!