ಗುರು ಮಂದಿರ ದೇವಾಲಯದ 450 ಮೆಟ್ಟಿಲನ್ನು23 ನಿಮಿಷದಲ್ಲಿ ಹತ್ತಿ ಇಂಡಿಯಾ ಬುಕ್‌ ಆಫ್ರೆಕಾರ್ಡ್‌ಗೆ ಸೇರಿದ 2 ವರ್ಷದ ಮಗು



(ನ್ಯೂಸ್‌ ಕಡಬ) newskadaba.com,  ನ.20 ತುಮಕೂರು : ತಾಲ್ಲೂಕು ಪಂಡಿತನಹಳ್ಳಿ ಬಳಿಯಿರುವ ಮಂದಾರಗಿರಿ ಬೆಟ್ಟದಲ್ಲಿರುವ ಗುರು ಮಂದಿರ ದೇವಾಲಯದ 450 ಮೆಟ್ಟಿಲುಗಳನ್ನು 23 ನಿಮಿಷ 8 ಸೆಕೆಂಡುಗಳಲ್ಲಿ ಹತ್ತುವ ಮೂಲಕ ಇಂಡಿಯಾ ಬುಕ್‌ ಅ್‌‍ ರೆಕಾರ್ಡ್‌ ಪ್ರಶಸ್ತಿಗೆ ಪಾತ್ರವಾದ ಎರಡು ವರ್ಷದ ಭುವನ್‌ ರೆಡ್ಡಿ.





ಅನುಷಾ ಮತ್ತು ರೆಡ್ಡಿ ಜಗದೀಶ್‌ ದಂಪತಿ ಪುತ್ರನಾದ ಭುವನ್‌ ರೆಡ್ಡಿಗೆ ಇಂಡಿಯಾ ಬುಕ್‌ ಅ್‌‍ ರೆಕಾರ್ಡ್‌ ಕೀರ್ತಿಗೆ ಪಾತ್ರನಾಗಿರುವ ಈ ಮಗು. ಭಾರತೀಯ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಸಹ ಕಳದ ಜನವರಿಯಲ್ಲಿ ಮುಡಿಗೆರಿಸಿಕೊಂಡಿದ್ದ.ಈ ಪ್ರಶಸ್ತಿ ಪಡೆಯುವಾಗ ಭುವನ್‌ ರೆಡ್ಡಿಗೆ 1 ವರ್ಷ 4 ತಿಂಗಳಾಗಿತ್ತು, ಚಿಕ್ಕ ವಯಸ್ಸಿನಲ್ಲಿಯೇ ಪ್ರಾಯೋಗಿಕವಾಗಿ ಬಹು ಕಲಿಕಾ ಚಟುವಟಿಕೆಗಳೊಂದಿಗೆ ಅದ್ಭುತ ಸಾಧನೆಗಳನ್ನು ಡಿ. ಭುವನ್‌ ರೆಡ್ಡಿ ಮಾಡಿದ್ದಾನೆ.






ಇಂಡಿಯನ್‌ ಬುಕ್‌ ಆ್‌‍ ರೆಕಾರ್ಡ್‌ ಬರಿಗಾಲಿನಲ್ಲಿ ನಡೆದ ಮೊದಲ ಭಾರತೀಯ ಮಗು ಎಂಬ ಕೀರ್ತಿಗೆ ಭುವನ್‌ ರೆಡ್ಡಿ ಪಾತ್ರನಾಗಿದ್ದಾನೆ. ನ್ಯಾಯಾಧೀಶರಾದ ಕೆ. ಮಾಧವ ರೆಡ್ಡಿ, ಡಾ. ಜೆ. ಪಾವನಿ ಮತ್ತು ಡಾ. ಕೆ. ಸ್ವರ್ಣಶ್ರೀ ಅವರು ಹೈದರಾಬಾದ್‌ನಲ್ಲಿ ಇಂಡಿಯನ್‌ ಬುಕ್‌ ಆ್‌‍ ರೆಕಾರ್ಡ್‌್ಸನಲ್ಲಿ ತೀರ್ಪು ನೀಡಿದ್ದಾರೆ.ಮುಂಬರುವ ವರ್ಷಗಳಲ್ಲಿ ಭುವನ್‌ ರೆಡ್ಡಿ ಇನ್ನಷ್ಟು ಸ್ಪೂರ್ತಿದಾಯಕ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಹಾರೈಸಿದ್ದಾರೆ.

error: Content is protected !!
Scroll to Top