ಮಂಗಳೂರು: 40 ಗಂಟೆಗಳ ಕಾಲ ನಿರಂತರ ಗಾಯನ – ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲೆ



(ನ್ಯೂಸ್ ಕಡಬ) newskadaba.com,  .20: ಎರಡು ದಿನಗಳಿಂದ ನಿರಂತರ‌ 40 ಗಂಟೆಗಳ ಕಾಲ ಹಾಡುವ ಮೂಲಕ ತಂಡವೊಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.





ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೋಲ್ಡರ್, ಜೀ ಕನ್ನಡದ ಸರಿಗಮ ಖ್ಯಾತಿಯ ಯಶವಂತ್ ಎಂ.ಜಿ. ಮಾರ್ಗದರ್ಶನದಲ್ಲಿ ಶೋಡಶಿ ಫೌಂಡೇಶನ್ ವತಿಯಿಂದ, ಭಾರತೀಯ ಸಿನೀ ಸಂಗೀತ ಲೋಕದ ಅಮರ ಗಾಯಕ ಕಿಶೋರ್ ಕುಮಾರ್ ಅವರಿಗೆ ಗೌರವವಾಗಿ ಮಂಗಳೂರು ಪುರಭವನದಲ್ಲಿ “ಗಾತಾ ರಹೇ ಮೇರಾ ದಿಲ್ ” ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಿತು.






ನವೆಂಬರ್ 18ರಂದು ಬೆಳಿಗ್ಗೆ 2.00 ಗಂಟೆಗೆ – ಡಿ ವೈ ಎಸ್ ಪಿ ಮಹೇಶ್ ಕುಮಾರ್ ದೀಪ ಬೆಳಗುವ ಮೂಲಕ ಪ್ರಾರಂಭಗೊಂಡ ಈ ಹಾಡುಗಳ ಸರಣಿ, 19ರಂದು ಸಂಜೆ 6.10 ಗಂಟೆಗೆ ಸಮಾಪ್ತಿಗೊಂಡಿತು. ಮಹಾ ಸಂಗೀತ ಸಂಭ್ರಮದಲ್ಲಿ ನೂರಮೂವತ್ತಕ್ಕೂ ಹೆಚ್ಚು ಹಾಡುಗಾರರು ಪಾಲ್ಗೊಂಡಿದ್ದರು.ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಅವರ ಪ್ರಮುಖ ಗೀತೆಗಳೊಂದಿಗೆ 40 ಗಂಟೆಗಳ ನಿರಂತರ ಗಾಯನ ಪ್ರದರ್ಶನ ನಡೆಯಿತು.

ಈ ಕಾರ್ಯಕ್ರಮವನ್ನು ಕರ್ನಾಟಕದ ಪ್ರಖ್ಯಾತ ಹಾಗೂ ಗೌರವಾನ್ವಿತ ಗಾಯಕರಿಂದ ನಡೆಸಲಾಗಿದ್ದು, ಸಂಗೀತಾಭಿಮಾನಿಗಳಿಗೆ ಸಾಂಸ್ಕೃತಿಕ ಹಬ್ಬದಂತೆಯೇ ಸಂಭ್ರಮ ನೀಡಿತು. ದಾಖಲೆ ಪೂರೈಸಿದ ಶೋಡಶಿ ಫೌಂಡೇಶನ್ ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಮನೀಷ್ ಬಿಷ್ಣೋಯ್, ಶಾಸಕ ವೇದವ್ಯಾಸ ಕಾಮತ್ ಪ್ರಮಾಣ ಪತ್ರ ವಿತರಿಸಿದರು.

error: Content is protected !!
Scroll to Top