ಬೆಂಗಳೂರು: ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಮೀಸಲಾತಿ ಪ್ರಮಾಣ ಕುರಿತ ಸುಪ್ರೀಂ ತೀರ್ಪು



(ನ್ಯೂಸ್‌ ಕಡಬ) newskadaba.com,  ನ.19  ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸಬಾರದೆಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಏಕೆಂದರೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್‌ ಹೆಗಡೆ, ಜಯಪ್ರಕಾಶ್‌ ಹೆಗಡೆ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗಳಿಗೆ ನೀಡಲಾಗುತ್ತಿರುವ ಹೆಚ್ಚಳ ಮಾಡಬೇಕೆಂದು ಶಿಫಾರಸ್ಸು ಮಾಡಿದ್ದರು.





ಇದರ ಪ್ರಕಾರ ಜನವರಿ ಇಲ್ಲವೇ ಫೆಬ್ರವರಿ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿದ್ದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ ಹಾಗೂ ಉಳಿದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಬಿಸಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿತ್ತು.ನೀವು ಶೇ.50ಕ್ಕಿಂತ ಹೆಚ್ಚು ಮೀಸಲಾತಿಯನ್ನು ಹೆಚ್ಚಳ ಮಾಡಿದರೆ ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಅಲ್ಲದೆ ಚುನಾವಣೆಯನ್ನೇ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಮಹಾರಾಷ್ಟ್ರಕ್ಕೆ ನೀಡಿರುವ ತೀರ್ಪು ದೇಶದ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ಗಂಟೆ ಎಂದು ಹೇಳಲಾಗುತ್ತಿದೆ.






ಇದು ಕೇವಲ ಮಹಾರಾಷ್ಟ್ರಕ್ಕೆ ಮಾತ್ರವಲ್ಲದೆ ದೇಶದ ಎಲ್ಲಾ ರಾಜ್ಯಗಳಿಗೂ ಈ ತೀರ್ಪು ಅನ್ವಯವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಯಪ್ರಕಾಶ್‌ ಹೆಗ್ಗಡೆ ನೇತೃತ್ವದ ಸಮಿತಿಯು ಪರಿಶಿಷ್ಟ ಜಾತಿ/ಪಂಗಡಗಳ ಮೀಸಲಾತಿ ಯಥಾಸ್ಥಿತಿ, ಪರಿಶಿಷ್ಟ ಜಾತಿ 17.15%, ಪರಿಶಿಷ್ಟ ಪಂಗಡಕ್ಕೆ 6.95% ಮೀಸಲಾತಿ, ಹಿಂದುಳಿದ ವರ್ಗ 1ಎ ಮೀಸಲಾತಿ 6% ಹೆಚ್ಚಿಸಬೇಕು, ಹಿಂದುಳಿದ ವರ್ಗ 1ಬಿ ಸೃಷ್ಟಿ, 12% ಮೀಸಲಾತಿ ಕೊಡಬೇಕು, ಹಿಂದುಳಿದ ವರ್ಗ 2ಎ 10% ಮೀಸಲಾತಿ ಕೊಡಬೇಕು, ಮುಸ್ಲಿಂ ಮೀಸಲಾತಿಯನ್ನು 4%ನಿಂದ 8%ಕ್ಕೆ ಏರಿಸಬೇಕು, ಲಿಂಗಾಯತ, ಉಪಜಾತಿಗಳ 3ಬಿ ಮೀಸಲಾತಿ 5%ನಿಂದ 8%ಕ್ಕೆ ಏರಿಸಬೇಕು, ಒಕ್ಕಲಿಗ, ಉಪಜಾತಿಗಳ 3ಎ ಮೀಸಲಾತಿ 4%ನಿಂದ 7%ಕ್ಕೆ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಿತ್ತು.

error: Content is protected !!
Scroll to Top