ಹೃದಯಾಘಾತ: ಕಡಬ ಮೆಸ್ಕಾಂ ಜೆಇ ಪಂಚಾಕ್ಷರಿ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಇಲ್ಲಿನ ಮೆಸ್ಕಾಂ ಕಛೇರಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ‌ ಪಂಚಾಕ್ಷರಿ ಹೃದಯಾಘಾತದಿಂದ ನಿಧನರಾದರು.

ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿಯಾಗಿದ್ದ ಇವರು ಲೈನ್ ಮ್ಯಾನ್ ಆಗಿ ಮೆಸ್ಕಾಂ ಇಲಾಖೆಗೆ ಕರ್ತವ್ಯಕ್ಕೆ ಹಾಜರಾಗಿ ಪದೋನ್ನತಿಗೊಂಡು ಜೆಇಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಪ್ಪಿನಂಗಡಿ ಹಾಗೂ ಆಲಂಕಾರಿನಲ್ಲಿ ಪ್ರಭಾರ ಜೆಇಯಾಗಿ ಕರ್ತವ್ಯ ನಿರ್ವಹಿಸಿ, ಪ್ರಸಕ್ತ ಕಡಬದ ಪವರ್ ಸ್ಟೇಷನ್ ನಲ್ಲಿ ಜೆಇಯಾಗಿ ಸೇವೆಯಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರರಿಬ್ಬರನ್ನು ಅಗಲಿದ್ದಾರೆ.

Also Read  ವಿಟ್ಲ ಪರಿಸರದಲ್ಲಿ ಮುಂದುವರಿದ ಕಳ್ಳರ ಕಾಟ ► ಮನೆಯ ಮುಂಭಾಗದ ಬೀಗ ಮುರಿದು ಕಳ್ಳತನ

error: Content is protected !!
Scroll to Top