ಸರ್ಕಾರದ ‘ಕಿಯೋ’ ಕಂಪ್ಯೂಟರ್ ₹18,999ಗೆ ಲಭ್ಯ!



(ನ್ಯೂಸ್‌ ಕಡಬ) newskadaba.com,  ನ.19  ಬೆಂಗಳೂರು : ಖಾಸಗಿ ಸ್ಟಾರ್ಟ್‌ ಅಪ್‌ಗಳು ಹಾಗೂ ರಾಜ್ಯ ಐಟಿ ಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ರಾಜ್ಯದಲ್ಲೇ ಅಭಿವೃದ್ಧಿಪಡಿಸಿ ನಿರ್ಮಿಸಿರುವ ಬಹುನಿರೀಕ್ಷೆಯ ಅಗ್ಗದ ದರದ ‘ಕಿಯೋ’ ಎಐ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.





ಲೀನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್‌ ಇರುವ ಕಿಯೋಗೆ 18,999 ರು. ದರ ನಿಗದಿಪಡಿಸಲಾಗಿದೆ. ಭಾರೀ ಕುತೂಹಲ ಕೆರಳಿಸಿರುವ ಕಿಯೋ ಕಂಪ್ಯೂಟರ್ ಟೆಕ್ ಸಮ್ಮಿಟ್‌ನ ಪ್ರಮುಖ, ವಿಶೇಷ ಆಕರ್ಷಣೆಯಾಗಿತ್ತು. ಅಲ್ಲದೆ, ಸಮ್ಮಿಟ್‌ಗೆ ಬಂದವರೆಲ್ಲರೂ ಕರ್ನಾಟಕ ಪೆವಿಲಿಯನ್‌ನಲ್ಲಿ ಪ್ರದರ್ಶನಕ್ಕೆ ಇರಿಸಿದ್ದ ಕಿಯೋ ಕಂಪ್ಯೂಟರ್‌ ಅನ್ನು ನೋಡಿ, ವಿವರಗಳನ್ನು ಕೇಳಿ ತಿಳಿದುಕೊಂಡರು.






ಕಿಯೋ ಒಂದು ಪೂರ್ಣ ರೂಪದ ಕಂಪ್ಯೂಟರ್

ಕಿಯೋ ಒಂದು ಪೂರ್ಣ ರೂಪದ ಕಂಪ್ಯೂಟರ್ ಆಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಈ ಕಂಪ್ಯೂಟರ್ ವೃತ್ತಿಪರ ಕ್ಯಾಮೆರಾ ಬ್ಯಾಟರಿ ಗಾತ್ರದಷ್ಟಿದೆ. ಇದು ರಾಜ್ಯದಲ್ಲೇ ಅಭಿವೃದ್ಧಿಪಡಿಸಿ, ನಿರ್ಮಿಸಿರುವ ಚಿಪ್‌ನಿಂದ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಮತ್ತೊಂದು ವಿಶೇಷ. ಲೀನಕ್ಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಕಿನೋ, ವೈಫೈ, ಎಥರ್‌ನೆಟ್‌, ಕಲಿಕೆಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳು, ಪ್ರೋಗ್ರಾಂಗಳು, ಪ್ರೊಡಕ್ಟಿವಿಟಿ ಟೂಲ್ಸ್‌ಗಳು ಇರಲಿವೆ. ಸದ್ಯ ಕಿಯೋ ಕಂಪ್ಯೂಟರ್‌ 8 ಜಿಬಿ ರ್‍ಯಾಮ್‌ ಮತ್ತು 32 ಜಿಬಿ ಮೆಮೊರಿ ಸ್ಟೋರೇಜ್‌ ಇರಲಿದ್ದು, ಸ್ಟೋರೇಜ್‌ ಅನ್ನು 1 ಟಿಬಿ ವರೆಗೆ ವಿಸ್ತರಿಸಿಕೊಳ್ಳಲು ಅ‍ವಕಾಶವಿದೆ.

error: Content is protected !!
Scroll to Top