ಪತ್ನಿಯೊಂದಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದ ಇಂಧನ ಸಚಿವ ► ಈ ಸಲ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆ: ಡಿಕೆಶಿ

(ನ್ಯೂಸ್ ಕಡಬ) newskadaba.com ಉಡುಪಿ, ಮೇ.03. ಈ ಬಾರಿ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆಯಾಗಿದ್ದು, ಧರ್ಮವು ಜಯಿಸಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ತನ್ನ ಧರ್ಮಪತ್ನಿಯ ಜೊತೆಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದ, ನಮ್ಮದು ಧರ್ಮ – ಬಿಜೆಪಿಯದ್ದು ಅಧರ್ಮವಾಗಿದೆ. ಮಠಕ್ಕೆ ಬರುವುದು ಬಿಡುವುದು ಅವರವರ ವೈಯಕ್ತಿಕ ವಿಚಾರವಾಗಿದ್ದು, ಸಿದ್ದರಾಮಯ್ಯ ಮಠಕ್ಕೆ ಬರಲಿಲ್ಲ ಎನ್ನುವ ಆರೋಪಕ್ಕೆ ಉತ್ತರಿಸಿದ ಸಚಿವರು, ಮಠಕ್ಕೆ ಬರದಿದ್ದರೂ ಮುಜರಾಯಿ ಇಲಾಖೆಯನ್ನು ಮುಚ್ಚಲಿಲ್ಲವಲ್ಲ. ಮಠಕ್ಕೆ ಯಾರು ಬಂದ್ರು ಯಾರು ಬರಲಿಲ್ಲ ಎನ್ನುವುದು ಮುಖ್ಯವಲ್ಲ. ಅದು ಅವರವರ ನಂಬಿಕೆಗೆ ಬಿಟ್ಟದ್ದು. ನನಗೆ ಕೃಷ್ಣನ ಮೇಲೆ ಬಹಳ ನಂಬಿಕೆಯಿದೆ. ಪಕ್ಷದ ಪರವಾಗಿ, ವೈಯುಕ್ತಿಕವಾಗಿ ಸರ್ಕಾರದ ಪರವಾಗಿ ಬಂದಿದ್ದೇನೆ ಎಂದರು. ಮಠದಲ್ಲಿ ಪರ್ಯಾಯ ಪಲಿಮಾರು ಶ್ರೀಯನ್ನು ಭೇಟಿಯಾಗಿ ಆಶಿರ್ವಾದ ಪಡೆದರು.

Also Read  ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಸಹಾಯಧನ ➤ ಗಿರಿರಾಜ ಕೋಳಿ ವಿತರಣೆ

error: Content is protected !!
Scroll to Top