ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆ ಯ ನಾಲ್ಕು ಕಬ್ಬಡ್ಡಿ ಪಟುಗಳು SGFI ಗೆ ಆಯ್ಕೆ ಗ್ರಾಮೀಣ ಮಕ್ಕಳ ಐತಿಹಾಸಿಕ ಸಾಧನೆ..ಕಬ್ಬಡಿ ಶಿಖರವೇರಿದ ಹಳ್ಳಿ ಕ್ರೀಡಾ ಪ್ರತಿಭೆಗಳು



(ನ್ಯೂಸ್‌ ಕಡಬ) newskadaba.com,  ನ.18 ಆಲಂಕಾರು :-ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ,36ನೇ ಅಖಿಲ ಭಾರತೀಯ ಖೇಲಖೂದ್,ಕಬ್ಬಡಿ ಟೂರ್ನಮೆಂಟ್ 2025-26 ಇದರ ವತಿಯಿಂದ ಭಾರತ ಭಾರತಿ ರೆಸಿಡೆನ್ಸಿಯಲ್ ಸಿ.ಬಿ.ಎಸ್.ಸಿ ಸ್ಕೂಲ್,ಜಾಮಟಿ,ಬೆತುಲ್,ಮಧ್ಯಪ್ರದೇಶ ಇಲ್ಲಿ ನಡೆದ 14 ರ ವಯೋಮಾನದ ಬಾಲಕಿಯರ ರಾಷ್ಟ್ರ ಮಟ್ಟದ ಕಬ್ಬಡಿ ಫೈನಲ್ ಫೈಟ್ ನಲ್ಲಿ.. ಬಲಿಷ್ಠ ವೆಸ್ಟ್ ಯು.ಪಿ ವಿರುದ್ದ 36-35 ಅಂತರದ ಜಯದೊಂದಿಗೆ  ದಕ್ಷಿಣ ಮಧ್ಯ ಕ್ಷೇತ್ರ ತಂಡವು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ದ ರಾಷ್ಟ್ರೀಯ ಕಬ್ಬಡಿ ಟೂರ್ನಮೆಂಟ್ ಗೆ ಆಯ್ಕೆಯಾಗಿರುತ್ತದೆ.





ತಂಡದಲ್ಲಿ ಶ್ರೀ ಭಾರತಿ ವಿದ್ಯಾಸಂಸ್ಥೆಯ ಕಬ್ಬಡಿ ಪಟುಗಳಾದ ತೃಷಾ ಕೋಡಂದೂರು (ಚಾರ್ವಾಕ ದಿ.ದಾಮೋದರ ಗೌಡ ಮತ್ತು ದೇವಿಕಾ ದಂಪತಿ ಪುತ್ರಿ ),ಧನ್ಯಶ್ರೀ ಅರ್ಬಿ (ಅರ್ಬಿ ಲೋಕೇಶ್ ಗೌಡ ದಂಪತಿಗಳ ಪುತ್ರಿ ),ಸಾತ್ವಿಕ ಕೆದ್ದೋಟ್ಟೆ (ಕುಂತೂರು ಕೆದ್ದೋಟ್ಟೆ ಶೇಖರ ಗೌಡ ಕೆ.ಕೆ ಮತ್ತು ಸುನೀತಾ ದಂಪತಿಗಳ ಪುತ್ರಿ)ಧ್ರುವಿ ಬಾಕಿಲ(ಚಾರ್ವಾಕ ಬಾಕಿಲ ವಸಂತ ಗೌಡ ಬಿ ಮತ್ತು ಲೀಲಾವತಿ ದಂಪತಿಗಳ ಪುತ್ರಿ ) ಈ ಕಬ್ಬಡಿ ಪಟುಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂದೆ ಡಿಸೆಂಬರ್ ನಲ್ಲಿ ತೆಲಂಗಾಣ ರಾಜ್ಯದ ವಿಜಯವಾಡದಲ್ಲಿ ಕೇಂದ್ರ ಸರಕಾರದ ಕ್ರೀಡಾ ಇಲಾಖೆಯ ಅಡಿಯಲ್ಲಿ ಬರುವ,ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ 14 ವಯೋಮಾನದ ರಾಷ್ಟ್ರೀಯ ಕಬ್ಬಡಿ ಟೂರ್ನಮೆಂಟ್ ನಲ್ಲಿ ದೇಶದ 29ರಾಜ್ಯ ಗಳಿಂದ ಬರುವ ತಂಡಗಳ ಮಧ್ಯೆ 30ನೇ ತಂಡವಾಗಿ ಕಣಕ್ಕಿಲಿಯರಿದ್ದಾರೆ.ಇದು ಆಲಂಕಾರು ಊರಿಗೆ ಐತಿಹಾಸಿಕ ಕ್ಷಣವಾಗಿದ್ದು,ನೂರಾರು ಕಬ್ಬಡಿ ಪ್ರೇಮಿಗಳು ಗ್ರಾಮೀಣ ಮಕ್ಕಳ SGFI ಸಾಧನೆ ಯನ್ನು ಕೊಂಡಾಡಿರುತ್ತಾರೆ.






ಈ ಸಾಧನೆಯ ಹಿಂದೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸುರೇಶ ಕುಮಾರ್ ಕೂಡೂರು,ಶಾಲಾ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ,ಉಪಾಧ್ಯಕ್ಷ ಈಶ್ವರಗೌಡ ಪಜ್ಜಡ್ಕ,ಕಾರ್ಯದರ್ಶಿ ಇಂದುಶೇಖರ ಶೆಟ್ಟಿ,ಕೋಶಧಿಕಾರಿ ರಾಮಚಂದ್ರ ಭಟ್ ಅತ್ರಿವನ,ಶಾಲಾ ಶೈಕ್ಷಣಿಕ ಪರಿವೀಕ್ಷಕ ಗಿರಿಶಂಕರ್ ಸುಲಾಯ ಸೇರಿದಂತೆ ಶಾಲೆಯ ಸಮಸ್ತ ಆಡಳಿತ ಮಂಡಳಿ,ಮುಖ್ಯ ಮಾತಾಜಿ ಆಶಾ ಎಸ್.ರೈ ಮುಖ್ಯ ಶ್ರೀಮಾನ್ ಸತೀಶ್ ಕುಮಾರ್ ಜಿ.ಆರ್ ಮಾರ್ಗದರ್ಶನ ಮಾಡಿರುತ್ತಾರೆ.ಶಾಲಾ ಮಾತಾಜಿ ವೃಂದ,ಸಿಬ್ಬಂದಿ ವರ್ಗ,ಪಾಲಕರ ವೃಂದ,ವಿದ್ಯಾರ್ಥಿ ವೃಂದ ಪೂರ್ಣ ಸಹಕರಿಸಿರುತ್ತಾರೆ.ಶಿಕ್ಷಕ ತಂಡದ ತರಬೇತುದಾರ ಚಂದ್ರಹಾಸ್ ಕೆ.ಸಿ ಕುಂಟ್ಯಾನ ಇವರ ಪೂರ್ಣ ತರಬೇತಿ ಮತ್ತು ಮಾರ್ಗದರ್ಶನದೊಂದಿಗೆ ಈ ಸಾಧನೆ ಯಾಗಿರುತ್ತದೆ.ಈ ಅದ್ಬುತ ಸಾಧನೆಗೆ ಇಡೀ ಭಾರತಿ ಪರಿವಾರ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

error: Content is protected !!
Scroll to Top