ಎಣ್ಮೂರು ಪ್ರೌಢಶಾಲಾ ದೈಹಿಕ ಶಿಕ್ಷಕ ರಾಮಚಂದ್ರ ಪಿ.ಎನ್. ನಿಧನ



ಕಡಬ, ನ.17. ಎಣ್ಮೂರು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ಸಮೀಪದ ಕೊಡಿಂಕಿರಿ ನಿವಾಸಿ ರಾಮಚಂದ್ರ ಪಿ.ಎನ್. (55) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರದಂದು ನಿಧನ ಹೊಂದಿದರು.





ಕಡಬ ಸರಕಾರಿ ಪ್ರೌಢಶಾಲೆ, ಕೊಂಬಾರು ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಎಣ್ಮೂರು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರಾಗಿದ್ದ ಅವರು ಕಡಬ ತಾಲೂಕು ಕಬಡ್ಡಿ ತೀರ್ಪುಗಾರರ ಮಂಡಳಿ ಸ್ಥಾಪಕಾಧ್ಯಕ್ಷರಾಗಿದ್ದು, ತಾಯಿ ರತ್ನಾವತಿ, ಪತ್ನಿ ಶಿಕ್ಷಕಿ ವನಿತಾ, ಪುತ್ರ, ಪುತ್ರಿ ಸೇರಿದಂತೆ ಹಲವಾರು ರಾಷ್ಟ್ರೀಯ ಕ್ರೀಡಾಪಟು ಶಿಷ್ಯರನ್ನು ಅಗಲಿದ್ದಾರೆ.






error: Content is protected !!
Scroll to Top