(ನ್ಯೂಸ್ ಕಡಬ) newskadaba.com, ನ.17: ಬೆಳ್ತಂಗಡಿ :- ಬಹುಮಾನ್ಯ ಸಯ್ಯಿದ್ ಉಮರ್ ಅಸ್ಸಕ್ವಾಫ್ ತಂಗಳ್ ರವರ ಸಾರಥ್ಯದ
ಮನ್ ಶರ್ ಪ್ಯಾರಾ ಮೆಡಿಕಲ್ ಕಾಲೇಜಿನ 5ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ರಾಜ್ಯ ಮಟ್ಟ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 15/11/2025 ರಂದು ಮನ್ ಶರ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಹುಮಾನ್ಯ ಸಯ್ಯದ್ ಅಬ್ದುಲ್ ರಹಿಮಾನ್ ಸಾದತ್ ತಂಗಳ್ ಬಾ ಅಲವಿ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಡಾ. ಯು. ಟಿ. ಖಾದರ್ ಫರೀದ್ ರವರವು ಆಗಮಿಸಿ, ಮನ್ ಷ್ಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪ್ಯಾರ ಮೆಡಿಕಲ್ ಹಾಗು ಪಿ. ಯು. ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ, ಮಾತುಗಳಿಂದ ವಿದ್ಯಾರ್ಥಿ ಗಳನ್ನು ಹುರುದುಂಬಿಸಿದರು.
ನಂತರ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡುತ್ತಾ,ಪದವಿ ಪಡೆಯುವಷ್ಟು ಸುಲಭವಲ್ಲ ಪದವಿಯ ನಂತರ ಉದ್ಯೋಗ ಪಡೆಯುವುದು,ಪಡೆದ ಉದ್ಯೋಗವನ್ನು ಪ್ರಮಾಣಿಕತೆಯಿಂದ ನಿರ್ವಹಿಸಿ, ಹೆತ್ತ ತಂದೆ, ತಾಯಿ, ಕಲಿತ ವಿದ್ಯಾಸಂಸ್ಥೆಗೆ ಒಳ್ಳೆಯ ಹೆರಸನ್ನು ತರಬೇಕು, ಹಾಗು, ಪ್ಯಾರಾಮೆಡಿಕಲ್ DMIT/DMLT ವಿಭಾಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ, ದ್ವಿತೀಯ, ತ್ರಿತಿಯ ಹಾಗೂ ಇತರ ರಾಂಕ್ ಪಡೆದ ವಿದ್ಯಾರ್ಥಿಗಳು, ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ, ವಿದ್ಯಾರ್ಥಿ ಜೀವನಕ್ಕೆ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿ… ಗ್ರಾಮೀಣ ಪ್ರದೇಶದಲ್ಲಿ ಪ್ಯಾರ ಮೆಡಿಕಲ್ ನಂತಹ ಕಾಲೇಜನ್ನು ಸ್ಥಾಪಿಸಿ ಕರ್ನಾಟಕ ರಾಜ್ಯಕ್ಕೆ ಪ್ರಥಮ, ದ್ವಿತೀಯ,ತೃತೀಯ ರಾಂಕುಗಳನ್ನು ಪಡೆಯುವಲ್ಲಿ ಹಾಗೂ ವೃತ್ತಿಪರ ಕೋರ್ಸ್ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಬದುಕು ಕಟ್ಟಿಕೊಡುವಲ್ಲಿ ಮನ್ ಷ್ಯರ್ ತಂಗಲ್ ರವರು ಮತ್ತು ಅವರ ತಂಡದ ಶ್ರಮವನ್ನ ಪ್ರಶಂಸಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜನಪ್ರಿಯ ಆಸ್ಪತ್ರೆಯ ಹಾಗು ವಿವಿಧ ಜನಪ್ರಿಯ ವಿದ್ಯಾಸಂಸ್ಥೆಯ ಡೈರೆಕ್ಟರ್ ಡಾ. ಅಬ್ದುಲ್ ಬಶೀರ್
ಕಕ್ಕಿಂಜೆ ಶ್ರೀಕೃಷ್ಣಆಸ್ಪತ್ರೆ ಯ ಮೆಡಿಕಲ್ ಡೈರೆಕ್ಟರ್,ಡಾ. ಮುರಳಿಕೃಷ್ಣ ಇರ್ವತ್ರಾಯ
ಮಂಗಳೂರು ಭಾರತ್ ಇನ್ಫೋ-ಟೆಕ್ ಕಂಪೆನಿಯ ಚೆ ರ್ಮನ್ ಎಸ್. ಎಂ. ಮುಸ್ತಾಫಾ
, ಮೀಫ್ ಉಪಾಧ್ಯಕ್ಷ. ಸೂಡ ಅಧ್ಯಕ್ಷರಾದ ಕೆ. ಎಮ್. ಮುಸ್ತಾಫಾ, ಸಯ್ಯಿದ್ ಸಲಾಂ ತಂಗಳ್ ಪೂಂಜಾಳಕಟ್ಟೆ ರವರು ಭಾಗವಹಿಸಿ, ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.ಪುತ್ತೂರಿನ ಪ್ರಖ್ಯಾತ ವಕೀಲರಾದ ನೂರುದ್ದಿನ್ ಸಾಲ್ಮರ, ಕಳಿಯ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿವಾಕರ, ಪಂಚಾಯತ್ ಸದಸ್ಯರಾದ, ಜನಾಬ್ ಅಬ್ದುಲ್ ಕರೀಂ ಗೇರುಕಟ್ಟೆ,ಕಳಿ ಯ ಪಂಚಾಯತ್ ಪ್ರಬಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಕುಂಞ, ಸುನ್ನಿ ಸಂಘಟನಾ ನಾಯಕ,
ಮನ್ ಷ್ಯರ್ ಹಿತೈಸಿ ಸಲೀಂ ಕನ್ಯಾಡಿ, ಉಪ್ಪಿನಂಗಡಿ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಜನಾಬ್ ಖಲೀಲ್, ಜನಪ್ರಿಯ ಆಸ್ಪತ್ರೆಯ ಆಡಳಿತಧಿಕಾರಿ ಜನಾಬ್ ಮನ್ಸೂರ್, ಪ್ಯಾರಾಮೆಡಿಕಲ್ ಅಲುಮಿನಿ ವಿದ್ಯಾರ್ಥಿ ನಾಯಕ ಸಫ್ವಾನ್, ರಿಜ್ವಾನ್, ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಗಣೇಶ್ ರವರು ಭಾಗವಹಿಸಿದರು.
ಮನ್ ಶರ್ ವಿಧ್ಯಾ ಸಂಸ್ಥೆಯ ಸ್ಥಾಪಕರಾದ ಸಯ್ಯದ್ ಉಮರ್ ಅಸ್ಸಖಾಫ್ ತಂಗಲ್ ರವರು
ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಹಕರಿಸಿದವರನ್ನು ಸ್ಮರಿಸಿದರು. ಕಾರ್ಯಕ್ರಮವನ್ನು ಸಂಸ್ಥೆಯ ಜನರಲ್ ಮ್ಯಾನೇಜರ್ ಹಾಗೂ ಪ್ಯಾರಾ ಮೆಡಿಕಲ್ ಪ್ರಾಂಶುಪಾಲರಾದ ಹೈದರ್ ಮರ್ಧಾಳ ಸ್ವಾಗತಿಸಿದರು . ನಿರೂಪಣೆಯನ್ನು ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಲರಾದ ಜೀನತ್ ನೆರವೇರಿಸಿದರು. ಸಂಸ್ಥೆಯ ಆಡಳಿತ ಅಧಿಕಾರಿ ರಶೀದ್ ಕುಪ್ಪೆಟ್ಟಿ ವಂದಿಸಿದರು.








