ಸುಳ್ಯ: ರಸ್ತೆಗೆ ನುಗ್ಗಿದ ಕಾಡುಹಂದಿ; ನಿಯಂತ್ರಣ ತಪ್ಪಿದ ಕಾರು



(ನ್ಯೂಸ್ ಕಡಬ) newskadaba.com,  .17: ಕಾರು ಸಂಚರಿಸುತ್ತಿದ್ದ ವೇಳೆ ಕಾಡು ಹಂದಿಯೊಂದು ದಿಢೀರನೆ ರಸ್ತೆಗೆ ಜಿಗಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದ ಘಟನೆ ಸುಳ್ಯ ಬಂದಡ್ಕ ಅಂತಾರಾಜ್ಯ ರಸ್ತೆಯ ಕೋಲ್ಚಾರಿನ ಕಣಕ್ಕೂರು ಸಮೀಪ ಭಾನುವಾರ ನಡೆದಿದೆ.





ಸುಳ್ಯದಿಂದ ಕೇರಳದ ಬಂದಡ್ಕ ಕಡೆಗೆ ಕಾರು ಸಂಚರಿಸುತ್ತಿದ್ದ ವೇಳೆ ಬೆಳಗ್ಗಿನ ಜಾವ ಕಾಡು ಹಂದಿಯೊಂದು ದಿಢೀರನೆ ಅಡ್ಡ ಬಂದಿದೆ. ಪರಿಣಾಮ ಚಾಲಕ ನಿಯಂತ್ರಣ ತಪ್ಪಿ ಕಾರು ರಸ್ತೆಯಿಂದ ಮೋರಿಯ ಕೆಳಗೆ ಉರುಳಿದೆ.






ಕಾರಿನಲ್ಲಿ ಚಾಲಕ ಒಬ್ಬರೇ ಇದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಕಾರು ತೀವ್ರವಾಗಿ ಜಖಂಗೊಂಡಿದೆ.

error: Content is protected !!
Scroll to Top