ಪೊಲೀಸರು ಜಪ್ತಿಗೆ ಆದೇಶಿಸಿದ ಕೊಕ್ಕಡದ ಮನೆಗೆ ಮುಸ್ಲಿಂ ನಿಯೋಗ ಭೇಟಿ ಸಂತ್ರಸ್ತ ಕುಟುಂಬಸ್ತರ ಜೊತೆ ಮಾತುಕತೆ



(ನ್ಯೂಸ್‌ ಕಡಬ) newskadaba.com,  ನ.15: ಗೋವಧೆಯ ಹೆಸರಿನಲ್ಲಿ ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಅಕ್ರಮವಾಗಿ ಜಪ್ತಿ ಮಾಡಲಾದ ಅಮಾಯಕ ಮಹಿಳೆ ಝೊಹರಾ ಎಂಬವರ ಮನೆಗೆ ತಾಲೂಕಿನ ಮುಸ್ಲಿಂ ಮುಖಂಡರ ನಿಯೋಗವು ಶನಿವಾರದಂದು ಭೇಟಿ ಮಾಡಿ ಮಾತುಕತೆ ನಡೆಸಿದರು.





ಘಟನೆಯ ವಿವರ ಪಡೆದ ನಿಯೋಗವು, ಈ‌ ಬಗ್ಗೆ ನಾವು ಪೊಲೀಸ್ ಮೇಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವ ಬಗ್ಗೆ ನಿಯೋಗವು ಭೇಟಿ ನೀಡುವ ಬಗ್ಗೆ ಆದ ನಿರ್ಣಯಗಳನ್ನು ತಿಳಿಸಲಾಯಿತು. ಹಾಗೂ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲಾಯಿತು. ಪುತ್ತೂರು‌ ಸಹಾಯಕ ಆಯುಕ್ತರ ಆದೇಶದಂತೆ ಮನೆ ಜಪ್ತಿ‌ ತೆರವಿಗೆ ಬಂದ ಪೊಲೀಸ್ ಅಧಿಕಾರಿಗಳ ಜೊತೆಯೂ ಮಾತುಕತೆ ನಡೆಸಲಾಯಿತು.






ನಿಯೋಗದಲ್ಲಿ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್, ಪ್ರಮುಖರಾದ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಕ್ಬರ್ ಬೆಳ್ತಂಗಡಿ, ಸಲೀಂ ಸುನ್ನತ್‌ ಕೆರೆ, ಕರೀಂ ಗೇರುಕಟ್ಟೆ, ಕೆ.ಎಸ್ ಅಬ್ದುಲ್ಲ ಕರಾಯ, ಲತೀಫ್ ಹಾಜಿ ಗುರುವಾಯನಕೆರೆ, ಮುಸ್ತಫಾ ಗುರುವಾಯನಕೆರೆ, ನಿಝಾರ್ ಕುದ್ರಡ್ಕ, ರಮೀಝ್ ಬೆಳ್ತಂಗಡಿ, ಉಮರ್ ಜಿ.ಕೆ, ಶಮೀಮ್ ಯೂಸುಫ್ ಮದ್ದಡ್ಕ, ಅಶ್ರಫ್, ಆಲಿಕುಂಞಿ ಮುಂಡಾಜೆ, ಹನೀಫ್ ಪುಂಜಾಲಕಟ್ಟೆ, ಅಬ್ದುಲ್ ರಹಿಮಾನ್ ಪಡ್ಪು, ಸಾಲಿಹ್ ಮದ್ದಡ್ಕ ಉಪಸ್ಥಿತರಿದ್ದರು.

error: Content is protected !!
Scroll to Top