ನಕಲಿ ಪಾಸ್‌ಪೋರ್ಟ್ ಜಾಲ ಪ್ರಕರಣ ► ಓರ್ವ ಆರೋಪಿಯನ್ನು ಕೈಬಿಟ್ಟ ಸಿಬಿಐ ನ್ಯಾಯಾಲಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.02. ನಕಲಿ ಪಾಸ್‌ಪೋರ್ಟ್ ಜಾಲಕ್ಕೆ ಸಂಬಂಧಿಸಿ 20 ಮಂದಿ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣದಿಂದ ಓರ್ವ ಆರೋಪಿಯನ್ನು ಸಿಬಿಐ ನ್ಯಾಯಾಲಯವು ಕೈಬಿಟ್ಟಿದೆ.

2015 ರಲ್ಲಿ ನಕಲಿ ಪಾಸ್‌ಪೋರ್ಟ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಚೆನ್ನೈನ ಸಿಬಿಐ ಪೊಲೀಸರು 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಂಗಳೂರು, ಹುಬ್ಬಳ್ಳಿಯ ಪಾಸ್‌ಪೋರ್ಟ್ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದರು. 2016 ರಲ್ಲಿ ಕೇರಳದ ಕಾಸರಗೋಡಿನ ಇಬ್ರಾಹಿಂ ಮೊಹಿನ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಬಗ್ಗೆ ಬೆಂಗಳೂರು ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಲೋಪದೋಷಗಳಿದ್ದು, ಆರೋಪಿಗಳ ಪೈಕಿ ಕಾಸರಗೋಡಿನ ಇಬ್ರಾಹಿಂ ಮೊಹಿನ್ ಅವರನ್ನು ಪ್ರಕರಣದಿಂದ ಕೈಬಿಡುವಂತೆ ನ್ಯಾಯವಾದಿಗಳಾದ ಮಜೀದ್ ಹಾಗೂ ಅಶ್ರಫ್ ಅವರ ನೇತೃತ್ವದ ತಂಡದ ನ್ಯಾಯವಾದಿ ಅನ್ಸಾರ್ ವಿಟ್ಲ ಅವರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ನ್ಯಾಯಾಲಯವು ಇಬ್ರಾಹಿಂ ಮೊಹಿನ್ ಅವರನ್ನು ಪ್ರಕರಣದಿಂದ ಕೈಬಿಟ್ಟಿದೆ.

Also Read  ಮೇ 12ರಂದು ದುಬೈಯಿಂದ ಮಂಗಳೂರಿಗೆ ಪ್ರಥಮ ವಿಮಾನ

error: Content is protected !!
Scroll to Top