(ನ್ಯೂಸ್ ಕಡಬ) newskadaba.com, ನ.13 ಬೆಂಗಳೂರು: ಬೆಳ್ಳಿ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಇಂದು ಒಂದೇ ದಿನಕ್ಕೆ 10 ರೂ ಜಿಗಿತ ಕಂಡಿದೆ. ನಿನ್ನೆ ಇದರ ಬೆಲೆ 2 ರೂ ಹೆಚ್ಚಿತ್ತು. ಚಿನ್ನದ ಬೆಲೆಯೂ (gold rate) ಕೂಡ ಏರಿಕೆಯ ಹಾದಿಗೆ ಮರಳಿದೆ.
ಗುರುವಾರ ಚಿನ್ನದ ಬೆಲೆಯಲ್ಲಿ 210 ರೂಗಳಷ್ಟು ಹೆಚ್ಚಳ ಆಗಿದೆ. ಆಭರಣ ಚಿನ್ನದ ಬೆಲೆ 11,700 ರೂ ಗಡಿದಾಟಿದೆ. ಅಪರಂಜಿ ಚಿನ್ನ 12,800 ರೂ ಗಡಿ ಸಮೀಪಕ್ಕೆ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,17,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,27,800 ರುಪಾಯಿ ಆಗಿದೆ.
100 ಗ್ರಾಮ್ ಬೆಳ್ಳಿ ಬೆಲೆ 17,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,17,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 17,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 18,200 ರೂ ಇದೆ.












