ಮೂಡುಬಿದಿರೆ : ರಾಜ್ಯಮಟ್ಟದ ಅಥ್ಲೆಟಿಕ್ಸ್; ಆಳ್ವಾಸ್‌ಗೆ ೧೧ ಪದಕ



(ನ್ಯೂಸ್‌ ಕಡಬ) newskadaba.com,  ನ.12 ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮೈಸೂರು ಹಾಗೂ ಆರ್‌ವಿ ಪದವಿಪೂರ್ವ ಕಾಲೇಜು ಮೈಸೂರು ಆಶ್ರಯದಲ್ಲಿ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಒಟ್ಟು ೭ ಚಿನ್ನ, ೩ ಬೆಳ್ಳಿ ಮತ್ತು ೧ ಕಂಚಿನ ಪದಕಗಳೊಂದಿಗೆ ಒಟ್ಟು ೧೧ ಪದಕಗಳನ್ನು ಗೆದ್ದಿದೆ. ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ೮ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.





ಬಾಲಕಿಯರ ವಿಭಾಗದಲ್ಲಿ: ನಾಗಿಣಿ – ೮೦೦ ಮೀ. (ಪ್ರಥಮ), ೧೫೦೦ ಮೀ. (ಪ್ರಥಮ), ಗುಡ್ಡಗಾಡು ಓಟ (ಪ್ರಥಮ), ೪೪೦೦ಮೀ ರಿಲೇ (ಪ್ರಥಮ), ಚರಿಷ್ಮಾ -೩೦೦೦ ಮೀ. (ಪ್ರಥಮ), ೧೫೦೦ ಮೀ. (ದ್ವಿತೀಯ), ಗುಡ್ಡಗಾಡು ಓಟ (ದ್ವಿತೀಯ), ೪೪೦೦ ಮೀ. ರಿಲೇ (ಪ್ರಥಮ), ಗೋಪಿಕಾ ಜಿ.- ೧೦೦ ಮೀ. (ಪ್ರಥಮ), ೪೧೦೦ ಮೀ. ರಿಲೇ (ಪ್ರಥಮ), ಮಾನ್ವಿ ವಿ. ಶೆಟ್ಟಿ- ೪೧೦೦ಮೀ ರಿಲೇ (ಪ್ರಥಮ), ಭಾನವಿ – ೪೧೦೦ಮೀ ರಿಲೇ (ಪ್ರಥಮ), ವೈಷ್ಣವಿ – ೪೧೦೦ಮೀ ರಿಲೇ (ಪ್ರಥಮ), ನಿರ್ಮಲಾ – ೪೦೦ ಮೀ. ಹರ್ಡಲ್ಸ್ (ದ್ವಿತೀಯ), ೪೪೦೦ ಮೀ. ರಿಲೇ (ಪ್ರಥಮ), ಜಾನಕಿ ಜಿ.ಸಿ. – ೪೪೦೦ಮೀ ರಿಲೇ (ಪ್ರಥಮ), ಗಾನವಿ- ೮೦೦ ಮೀ. (ತೃತೀಯ) ಸ್ಥಾನ ಪಡೆದಿದ್ದಾರೆ.






ವೈಯಕ್ತಿಕ ಪ್ರಶಸ್ತಿಯನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ ನಾಗಿಣಿ ಪಡೆದುಕೊಂಡರು.
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

error: Content is protected !!
Scroll to Top