ರೈಲ್ವೆ ಇಲಾಖೆಯಲ್ಲಿ ನೇಮಕಾತಿ



(ನ್ಯೂಸ್‌ ಕಡಬ) newskadaba.com,  ನ.12 ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯು ತಾಂತ್ರಿಕೇತರ ವರ್ಗದ ದಲ್ಲಿ ಉದ್ಯೋಗಾವಕಾಶವಿದ್ದು,ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 8,860 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.





5,817 ಪದವೀಧರ ಹುದ್ದೆಳು ಹಾಗೂ 3058 ಅಂಡರ್​ ಗ್ರಾಜುಯೇಟ್​ ಹುದ್ದೆಗಳು ಇದ್ದು, ಅರ್ಜಿ ಸಲ್ಲಿಕೆಗೆ ನವೆಂಬರ್ ಕೊನೆ ದಿನವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ner.indianrailways.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆ ಕುರಿತಾದ ಮಾಹಿತಿ, ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ .






ಒಟ್ಟು 8,860 ಹುದ್ದೆಗಳು ಖಾಲಿ ಇದ್ದು, ಸ್ಟೇಷನ್​ ಮಾಸ್ಟರ್​ ವಿಭಾಗದಲ್ಲಿ 615, ಗೂಡ್ಸ್​ ಟ್ರೈನ್​ ಮ್ಯಾನೇಜರ್​ – 342, ಚೀಫ್​ ಕಮರ್ಷಿಯಲ್​ ಕಮ್​ ಟಿಕೆಟ್​ ಸೂಪರ್​ವೈಸರ್​ -161, ಜೂನಿಯರ್​ ಅಕೌಂಟ್​ ಅಸಿಸ್ಟಂಟ್ ಕಮ್​ ಟೈಪಿಸ್ಟ್​ -921, ಸೀನಿಯರ್​ ಕ್ಲರ್ಕ್​ ಕಮ್​ ಟೈಪಿಸ್ಟ್​ – 638 ಹುದ್ದೆಗಳ ಭರ್ತಿಗೆ ಆಯ್ಕೆ ನಡೆಯಲಿದೆ.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.

error: Content is protected !!
Scroll to Top