ಕಾಮಗಾರಿಯ ಹಿನ್ನೆಲೆ ಇಂದು ಸ್ಥಗಿತಗೊಳ್ಳಲಿದ್ದ ವಿದ್ಯುತ್ ನಾಳೆಗೆ ಮುಂದೂಡಿಕೆ ► ಇಂದು ವಿದ್ಯುತ್ ಎಂದಿನಂತೆ ಮುಂದುವರಿಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.02. ಪ್ರಸ್ತುತ ನೆಟ್ಲಮುಡ್ನೂರು – ಪುತ್ತೂರು ಮಾರ್ಗದಲ್ಲಿರುವ ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಮೇ 02 ಬುಧವಾರ ಹಾಗೂ ಮೇ 05 ಶನಿವಾರದಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು ಎಂದು ಮೆಸ್ಕಾಂ ತಿಳಿಸಿತ್ತಾದರೂ, ಕಾರಣಾಂತರಗಳಿಂದ ಗುರುವಾರಕ್ಕೆ ಮುಂದೂಡಲಾಗಿದೆ.

ಆದುದರಿಂದ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ವ್ಯಾಪ್ತಿಯ 110/33/11 ಕೆವಿ ಪುತ್ತೂರು ಹಾಗೂ 33/11 ಕೆವಿ ಕ್ಯಾಂಪ್ಕೋ, ಕುಂಬ್ರ, ಬೆಳ್ಳಾರೆ, ಸುಳ್ಯ, ಸವಣೂರು, ನೆಲ್ಯಾಡಿ, ಕಡಬ ಮತ್ತು ಸುಬ್ರಹ್ಮಣ್ಯ ಉಪ ವಿದ್ಯುತ್ ಕೇಂದ್ರ ವ್ಯಾಪ್ತಿಯಲ್ಲಿ ಮೇ 02 ಬುಧವಾರದಂದು ವಿದ್ಯುತ್ ಎಂದಿನಂತೆ ಮುಂದುವರಿಯಲಿದ್ದು, ಗುರುವಾರದಂದು ವಿದ್ಯುತ್ ಕಡಿತಗೊಳ್ಳಲಿದೆ. ಬಳಕೆದಾರರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಪುತ್ತೂರು: ಮನೆಯ ಮೇಲೆ ಗುಡ್ಡ ಕುಸಿತ ► ಇಬ್ಬರು ಮೃತ್ಯು

error: Content is protected !!
Scroll to Top