(ನ್ಯೂಸ್ ಕಡಬ) newskadaba.com,ನ.12 ಪುತ್ತೂರು: ಮುಂದಿನ 3 ವರ್ಷಗಳ ಅವಧಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸಮಿತಿಗೆ ಸದಸ್ಯರ ಆಯ್ಕೆಗೆ ನ.09 ರಂದು ಮಂಗಳೂರಿನಲ್ಲಿರುವ ದ.ಕ ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ಚುನಾವಣೆ ನಡೆಯಿತು…
ಬೆಳಗ್ಗೆ 9 ರಿಂದ ಸಂಜೆ 3 ಗಂಟೆ ತನಕ ಚುನಾವಣೆ ನಡೆದು ಬಳಿಕ ಮತ ಎಣಿಕೆ ನಡೆಯಿತು. ಅಧ್ಯಕ್ಷರಾಗಿ ವಾರ್ತಾಭಾರತಿಯ ಮಂಗಳೂರು ಚೀಫ್ ಬ್ಯೂರೋ ,ಕಡಬ ತಾಲೂಕಿನ ಕೊಯಿಲ ನಿವಾಸಿ ಪುಷ್ಪರಾಜ್ ಬಿ..ಎಸ್. ಚಉನಾಯಿತರಾಗಿದ್ಧಾರೆ. ಪುಷ್ಪರಾಜ್ ಅವರು 187 ಮತಗಳನ್ನು ಪಡೆದುಕೊಂಡಿದ್ದು ಇವರ ಪ್ರತಿಸ್ಪರ್ಧಿಯಾಗಿದ್ಧ ವಿಜಯವಾಣಿಯ ಮಂಗಳೂರು ಹಿರಿಯ ವರದಿಗಾರ ಶ್ರವಣ್ ಕುಮಾರ್.ಕೆ 144 ಮತ ಪಡೆದು ಪರಾಭವಗೊಂಡಿದ್ಧಾರೆ.
3 ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮುಹಮ್ಮದ್ ಆರೀಫ್-180,ವಿಲ್ರೆಡ್ ಡಿ ಸೋಜ -177,ರಾಜಾ ಶೆಟ್ಟಿ-147 ಮತ ಪಡೆದು ಆಯ್ಕೆಯಾಗಿದ್ದಾರೆ..ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಐ.ಬಿ ಸಂದೀಪ್ ಕುಮಾರ್-136 ಹಾಗೂ ಗಂಗಾಧರ ಕಲ್ಪಪ್ಪಳ್ಳಿ-126 ಮತಗಳನ್ನು ಪಡೆದುಕೊಂಡಿದ್ದಾರೆ…3 ಕಾರ್ಯದರ್ಶಿ ಸ್ಥಾನಗಳಿಗೆ ನಡೆದ ಸ್ಪರ್ಧೆಯಲ್ಲಿ ಸತೀಶ್ ಇರಾ-256,ಸುರೇಶ್ ಡಿ.ಪಳ್ಳಿ -218,ಎ ಸಿದ್ದಿಕ್ ನೀರಾಜೆ-165 ಮತ ಪಡೆದು ಜಯಗಳಿಸಿದ್ದಾರೆ..
ಚುನಾವಣಾಧಿಕಾರಿಯಾಗಿದಗದ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯಿತು..ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೇಶ್ ಕೆ.ಪೂಜಾರಿ ಹಾಗೂ ಕೋಶಾಧಿಕಾರಿ ಹುದ್ದೆಗೆ ವಿಜಯ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ…ಚುನಾವಣೆಯಲ್ಲಿ ಸಂಘದ ಒಟ್ಟು 23 ಸ್ಥಾನಗಳಿಗೆ34 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು..








