ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಾಂತಾರ’, ‘ಕೆಜಿಎಫ್’ಗಾಯಕಿ ಅನನ್ಯ ಭಟ್



(ನ್ಯೂಸ್ಕಡಬ) newskadaba.com,  ನ.11  ʻಸೋಜುಗಾದ ಸೂಜಿ ಮಲ್ಲಿಗೆʼ  ಹಾಡಿನಿಂದ ಜನಪ್ರಿಯರಾದ ಅನನ್ಯ ಭಟ್‌  ಹಸೆಮಣೆ ಏರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಮ್ಯೂಜಿಷಿಯನ್ ಮತ್ತು ಡ್ರಮ್ಮರ್ ಮಂಜು ಅವರೊಂದಿಗೆ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ಇದೀಗ ಗಾಯಕಿಯ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾ ಮೂಲಕ ವಿಶಸ್‌ ತಿಳಿಸುತ್ತಿದ್ದಾರೆ.





ಅನನ್ಯ ಭಟ್ ಕನ್ನಡದ ಜೊತೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ಗಾಯನದ ಮೂಲಕ ಗುರುತಿಸಿಕೊಂಡವರು. ಕಂಚಿನ ಕಂಠ ಎಂದೇ ಅವರಿಗೆ ಫ್ಯಾನ್ಸ್‌ ಬಿರುದು ನೀಡಿದ್ದರು






ಈ ಜೋಡಿ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಹೀಗಾಗಿ ನೆಟ್ಟಿಗರು ಪ್ರೇಮ ವಿವಾಹ ಎನ್ನುತ್ತಿದ್ದಾರೆ. ಸರಳವಾಗಿ ಈ ಜೋಡಿ ತಮ್ಮ ಆಪ್ತರ ಸಮ್ಮುಖದಲ್ಲಷ್ಟೇ ಮದುವೆಯಾಗಿದೆ. ಈ ಮೊದಲು ಅನನ್ಯಾ ‘ಊರ್ವಿ’ ಮತ್ತು ‘ಭೂತಕಾಲ’ ಎಂಬ ಚಿತ್ರಗಳಲ್ಲಿ ನಟಿಸಿದ್ದರು.ಕೆಜಿಎಫ್, ಕಾಂತಾರ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದರು.

error: Content is protected !!
Scroll to Top