(ನ್ಯೂಸ್ ಕಡಬ) newskadaba.com, ನ.10 ಸುಳ್ಯ: ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್, ಹಾಗೂ ಸೀನಿಯರ್ ವಿಭಾಗದ ಪುರುಷ ಮತ್ತು ಮಹಿಳೆಯರ ವೇಟ್ ಲಿಪ್ಟಿಂಗ್ ಚಾಂಪಿಯನ್ ಷಿಪ್ ೨೦೨೫ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿಯ ಸುಳ್ಯದ ಜೂನಿಯಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿದೆ.ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆ ಬೆಂಗಳೂರು ಇವರ ಮೂಲಕ ಸುಳ್ಯದ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಎಸೋಸಿಯೇಶನ್ ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಇದರ ಸಂಘಟನಾ ಸಮಿತಿಯ ಸಹಯೋಗದಲ್ಲಿ ಮೂರು ದಿನ ನಡೆಯಲಿದೆ.
ಶುಕ್ರವಾರ ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ ಪಂದ್ಯಗಳು ನಡೆದಿದ್ದು “ಬಿ” ಗುಂಪಿನಲ್ಲಿ ಪುರುಷರ ೬೫ ಕೆ.ಜಿ ವಿಭಾಗದ ಪಂದ್ಯಾಟ ನಡೆಯಿತು. ಈ ವಿಭಾಗದಲ್ಲಿ ೧೭ ಸ್ಪರ್ಧಿಗಳು ಭಾಗವಹಿಸಿದರು. “ಸಿ” ಗುಂಪಿನಲ್ಲಿ ೫೬ – ೬೦ ಕೆ.ಜಿ ಒಳಗಿನ ಪುರುಷರ ವಿಭಾಗದ ಪಂದ್ಯದಲ್ಲಿ ೧೬ ಸ್ಪರ್ಧಿಗಳು ಭಾಗವಹಿಸಿದರು.
ಮಹಿಳಾ ವಿಭಾಗದ “ಬಿ” ಗುಂಪಿನಲ್ಲಿ ೪೪ – ೪೮ ಕೆ.ಜಿ ವಿಭಾಗದ ಪಂದ್ಯಾಟದಲ್ಲಿ ೧೬ ಮಂದಿ ಕ್ರೀಡಾಪಟುಗಳು ಭಾರ ಎತ್ತಿದರು. ಪುರುಷರ ವಿಭಾಗದ “ಬಿ” ಗುಂಪಿನಲ್ಲಿ ೫೬ – ೬೦ ಕೆ.ಜಿ ವಿಭಾಗದ ಪಂದ್ಯಾಟ ನಡೆಯಿತು. ಇದರಲ್ಲಿ ೧೭ ಮಂದಿ ಸ್ಪರ್ಧಾಳುಗಳು ಭಾಗವಹಿಸಿದರು. ಮೊದಲ ದಿನ ಆಕರ್ಷಕ ಇಂಡೋರ್ ಸ್ಟೇಡಿಯಂನ ೨ ಅಂಕಣದಲ್ಲಿ ನಡೆದ ಪಂದ್ಯಾಟದಲ್ಲಿ ಒಟ್ಟು ೬೬ ಮಂದಿ ಕ್ರೀಡಾಳುಗಳು ಭಾರ ಎತ್ತಿ ಸಾಮರ್ಥ್ಯ ಹೊರ ಹಾಕಿದರು.








