ವಾರಣಸಿ :ರಸ್ತೆ ರೈಲು ವಿಮಾನ ಸೇವೆಯಿಂದ ಸಂಪರ್ಕ ಕ್ರಾಂತಿ: ಮೋದಿ



(ನ್ಯೂಸ್ಕಡಬ) newskadaba.com,  ನ.08 ವಾರಣಾಸಿ-ಖಜುರಾಹೊ, ಲಕ್ನೋ-ಸಹಾರನ್‌ಪುರ, ಫಿರೋಜ್‌ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸಲಿದ್ದು, ದೇಶದ ಹಲವು ಪ್ರದೇಶಗಳಲ್ಲಿ ವೇಗದ ಪ್ರಯಾಣ ಮತ್ತು ಸುಧಾರಿತ ಸಂಪರ್ಕ ಖಚಿತ ಪಡಿಸಲಿವೆ.ಬನಾರಸ್-ಖಜುರಾಹೊ ವಂದೇ ಭಾರತ್ ವಾರಣಾಸಿ, ಪ್ರಯಾಗ್‌ರಾಜ್ ಮತ್ತು ಚಿತ್ರಕೂಟ ಸೇರಿದಂತೆ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ.





ವಂದೇ ಭಾರತ್ ರೈಲುಗಳ ಆರಂಭದಿಂದ ಪ್ರವಾಸೋದ್ಯಮ ಹೆಚ್ಚಳ ಮತ್ತು ಸ್ಥಳೀಯ ಆರ್ಥಿಕತೆ ಉತ್ತೇಜನಕ್ಕೆ ಸಹಕಾರಿಯಾಗಲಿದೆ.ಸೀತಾಪುರ, ಶಹಜಹಾನ್ಪುರ, ಬರೇಲಿ, ಮೊರಾದಾಬಾದ್, ಬಿಜ್ನೋರ್ ಮತ್ತು ಸಹರಾನ್ಪುರ ಸೇರಿದಂತೆ ಪ್ರಮುಖ ನಗರಗಳನ್ನು ಒಳಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಆರಂಭದಿಂದ ದೈನಂದಿನ ಪ್ರಯಾಣಿಕರು ಮತ್ತು ದೂರದ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳು ಮತ್ತು ಕಡಿಮೆ ಪ್ರಯಾಣದ ಸಮಯದಲ್ಲಿ ತಲುಪಲು ಸಾಧ್ಯವಾಗಲಿದೆ ಎಂದಿದ್ದಾರೆ.






ಹೊಸ ರೈಲುಗಳು ಪಾರಂಪರಿಕ ನಗರಗಳನ್ನು ಸಂಪರ್ಕಿಸುವುದಲ್ಲದೆ ಅಭಿವೃದ್ಧಿ ವೇಗಗೊಳಿಸುತ್ತವೆ. ಉತ್ತರ ಪ್ರದೇಶವನ್ನು ಉದಾಹರಣೆಯಾಗಿಟ್ಟುಕೊಂಡು, ಕಳೆದ ೧೧ ವರ್ಷಗಳಲ್ಲಿ ನಡೆದ ಅಭಿವೃದ್ಧಿ ಚಟುವಟಿಕೆಗಳು ರಾಜ್ಯದ ಆರ್ಥಿಕತೆಯನ್ನು ಬಲಪಡಿಸಿವೆ. ಇದು ರಾಜ್ಯದ ಆರ್ಥಿಕ ಬೆಳವಣಿಗೆಗೆ ಸಾವಿರಾರು ಕೋಟಿ ರೂಪಾಯಿಗಳ ಕೊಡುಗೆ ನೀಡಿದೆ ಎಂದಿದ್ದಾರೆಈ ವೇಳೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

error: Content is protected !!
Scroll to Top