ಒಂದು ಲಕ್ಷ ಮನೆಗಳಿಗೆ ಕಸದಿಂದ ಉತ್ಪಾದಿಸಿದ ವಿದ್ಯುತ್‌ ಪೂರೈಕೆ



(ನ್ಯೂಸ್ಕಡಬ) newskadaba.com,  ನ.07 ಬೆಂಗಳೂರು : ಸಾರ್ವಜನಿಕರು ಕಟ್ಟುನಿಟ್ಟಾಗಿ ಹಸಿ ಮತ್ತು ಒಣ ಕಸ ವಿಂಗಡಿಸಿಕೊಟ್ಟರೆ ಒಂದು ಲಕ್ಷ ಮನೆಗಳಿಗೆ ಕಸದಿಂದ ಉತ್ಪಾದಿಸಿದ ವಿದ್ಯುತ್‌ ಪೂರೈಕೆ ಮಾಡಬಹುದಾಗಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ತಿಳಿಸಿದ್ದಾರೆ.





ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಕರ್ನಾಟಕ ಪವರ್ ಕಾರ್ಪೊರೇಶನ್ (ಕೆಪಿಸಿಎಲ್) ಸಹಭಾಗಿತ್ವದಲ್ಲಿ ಬಿಡದಿಯಲ್ಲಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು….






314.74 ಕೋಟಿ ರು. ವೆಚ್ಚದಲ್ಲಿ ಘಟಕ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 314.74 ಕೋಟಿ ರು. ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ. ಘಟಕಕ್ಕೆ ಒಂದು ವಾರದಿಂದ ಪ್ರತಿದಿನ 200 ಟನ್ ಒಣ ತ್ಯಾಜ್ಯ ಪೂರೈಕೆ ಆಗುತ್ತಿದ್ದು, ಸುಮಾರು 4 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆ ಆಗುತ್ತಿದೆ.ಘಟಕದ ಸಾಮರ್ಥ್ಯಕ್ಕೆ ತಕ್ಕಂತೆ 600 ಟನ್ ಕಸ ಒಣ ಕಸ ಪೂರೈಕೆಯಾದರೆ ನಿತ್ಯ 11.50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಇದರಿಂದ ಪ್ರತಿ ಮನೆಗೆ ಸರಾಸರಿ 5 ಯೂನಿಟ್ ವಿದ್ಯುತ್ ಬಳಸಿದರೆ ಸುಮಾರು 25 ಸಾವಿರ ಮನೆಗಳಿಗೆ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದರು..

error: Content is protected !!
Scroll to Top