ಅಕ್ಟೋಬರ್ ತಿಂಗಳ ರಾಜ್ಯವಾರು ಸರಕು ಮತ್ತು ಸೇವಾ ತೆರಿಗೆ ಆದಾಯ ವರದಿ ಬಿಡುಗಡೆ; ಬೆಳವಣಿಗೆ ದರದಲ್ಲಿ ಕರ್ನಾಟಕ ಪ್ರಥಮ ಸ್ಥಾನ



(ನ್ಯೂಸ್ಕಡಬ) newskadaba.com,  ನ.06 ಬೆಂಗಳೂರು: 2025ರ ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಬೆಳವಣಿಗೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ. ದಸರಾ ಹಬ್ಬದ ಸಮಯದಲ್ಲಿ ಕರ್ನಾಟಕ ಜಿಎಸ್ಟಿ ಸಂಗ್ರಹದಲ್ಲಿ ಹೆಚ್ಚಿನ ಸಂಗ್ರಹ ಮಾಡಿದ್ದು, ಸೆಪ್ಟೆಂಬರ್‌ನಿಂದ ತೆರಿಗೆ ಆದಾಯದಲ್ಲಿ 10% ಬೆಳವಣಿಗೆ ದಾಖಲಾಗಿದೆ.2024ರ ಅಕ್ಟೋಬರ್​ಗೆ ಹೋಲಿಸಿದರೆ 2025ರ ಅಕ್ಟೋಬರ್​ ಆಂತರಿಕ ಜಿಎಸ್​​ಟಿ 1,45,052 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಶೇ.2ರಷ್ಟು ಬೆಳವಣಿಗೆ ಹೊಂದಿದೆ.





ಹಣಕಾಸು ಸಚಿವಾಲಯ ರಾಜ್ಯಗಳ ಜಿಎಸ್​​ಟಿ ಆದಾಯದ ಸಂಗ್ರಹ ಮತ್ತು ಬೆಳವಣಿಗೆ ದರ ಮಾಹಿತಿ ಬಿಡುಗಡೆ ಮಾಡಿದ್ದು, ಆ ಪೈಕಿ ಅಕ್ಟೋಬರ್ ತಿಂಗಳ ಜಿಎಸ್‌ಟಿ ಆದಾಯ 1.95 ಲಕ್ಷ ಕೋಟಿ ರೂ ಸಂಗ್ರಹವಾಗಿದೆ. ತೆರಿಗೆ ಕಡಿತದ ಹೊರತಾಗಿಯೂ ಶೇ. 4.6 ರಷ್ಟು ಏರಿಕೆ ಕಂಡಿದೆ.ಹಣಕಾಸು ಸಚಿವಾಲಯದ ಮಾಹಿತಿಯ ಪ್ರಕಾರ, ಕೇಂದ್ರ ಜಿಎಸ್‌ಟಿ 36,547 ಕೋಟಿ ರೂ., ರಾಜ್ಯ ಜಿಎಸ್‌ಟಿ 45,134 ಕೋಟಿ ರೂ. ಮತ್ತು ಇಂಟಿಗ್ರೇಟೆಡ್ ಜಿಎಸ್‌ಟಿ 1,06,443 ಕೋಟಿ ರೂ ಸೇರಿದಂತೆ ಹೆಚ್ಚುವರಿಯಾಗಿ ಸರ್ಕಾರವು ಸೆಸ್‌ನಿಂದ 7,812 ಕೋಟಿ ರೂ. ಸಂಗ್ರಹಿಸಿದೆ.






ಅಕ್ಟೋಬರ್ ತಿಂಗಳ ಜಿಎಸ್‌ಟಿ ಸಂಗ್ರಹದ ಕುರಿತು ಶನಿವಾರ ಬಿಡುಗಡೆಯಾದ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ನಡೆದ ವಹಿವಾಟುಗಳಲ್ಲಿ ಕರ್ನಾಟಕ ರಾಜ್ಯ 14,395 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 13,080 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿತ್ತು. ಕೇಂದ್ರ ಜಿಎಸ್‌ಟಿಯ ಅಂಶಗಳು, ಅಂತರರಾಜ್ಯ ವಹಿವಾಟಿನ ಮೇಲಿನ ತೆರಿಗೆ, ಸಂಯೋಜಿತ ಜಿಎಸ್‌ಟಿ ಮತ್ತು ಸೆಸ್ ಸೇರಿದಂತೆ ಒಟ್ಟು ಸಂಗ್ರಹ ಇದಾಗಿದೆ.

error: Content is protected !!
Scroll to Top