ವಾಟ್ಸ್ಯಾಪ್ನಲ್ಲಿ ಹೊಸ ವಂಚನೆ, ಆರ್ಟಿಒ ಚಲನ್ ಹೆಸರಿನಲ್ಲಿ ಧೋಖಾ



(ನ್ಯೂಸ್‌ ಕಡಬ) newskadaba.com,  ನ.05:  ವಾಟ್ಸ್ಯಾಪ್‌ ಮೂಲಕ ಹೊಸ ಬಗೆಯ ವಂಚನೆಯೊಂದು (WhatsApp RTO challan scam) ಇದೀಗ ಜೋರಾಗಿ ನಡೆಯುತ್ತಿದ್ದು, ಕೋಟ್ಯಂತರ ರೂಪಾಯಿಗಳನ್ನು ನಾಗರಿಕರಿಗೆ ವಂಚಿಸಲಾಗಿದೆ. ಈ ವಂಚನೆಗೆ ನಕಲಿ ಆರ್‌ಟಿಒ ಚಲನ್‌ಗಳನ್ನು ಬಳಸಲಾಗುತ್ತಿದೆ. ಹಲವಾರು ಜನರು ಅಪರಿಚಿತ ಸಂಖ್ಯೆಗಳಿಂದ ನಕಲಿ RTO ಚಲನ್ ಸಂದೇಶಗಳನ್ನು ಸ್ವೀಕರಿಸುತ್ತಿದ್ದು, ಅವರ ವಾಹನದ ನಂಬರ್‌ಗೆ ಇದನ್ನು ನೀಡಲಾಗುತ್ತಿದೆ. ನಾಗರಿಕರು ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.





ಈ ನಕಲಿ ಚಲನ್‌ಗಳು ನಿಮ್ಮ ವಾಟ್ಸ್ಯಾಪ್‌ಗೆ ಬರುತ್ತಿದ್ದು, ನಿಮ್ಮ ವಾಹನದ ನಂಬರ್‌ ಮೇಲೆ ಟ್ರಾಫಿಕ್‌ ಪೊಲೀಸ್‌ ದಂಡವನ್ನು ವಿಧಿಸಲಾಗಿದೆ ಎಂದು ಸೂಚಿಸುತ್ತದೆ. ನಿಮ್ಮಿಂದ ಅವರ ಖಾತೆಗಳಿಗೆ ಹಣ ಕಟ್ಟಿಸಿಕೊಳ್ಳುತ್ತಾರೆ. ಈ ಸಂದೇಶ ಅಧಿಕೃತ ಇಲಾಖಾ ಆದೇಶ ಎಂಬಂತೆಯೇ ಕಾಣುತ್ತದೆ. ಅಟ್ಯಾಚ್‌ಮೆಂಟ್‌ ಫೈಲನ್ನು ಸಹ ಇದು ಹೊಂದಿರುತ್ತದೆ. ಆದರೆ ಮೋಸ ಹೋದ ಬಳಿಕವೇ ಗೊತ್ತಾಗುತ್ತದೆ.






ಸೈಬರ್ ಸೆಕ್ಯುರಿಟಿ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಪ್ರಕಾರ, ನಿಮಗೆ ಬರುವ ಈ ಫೈಲ್ ಅನ್ನು ತೆರೆದ ಕೂಡಲೇ ನಿಮ್ಮ ಫೋನ್‌ಗೆ ಮಾಲ್‌ವೇರ್‌ ಅಪಾಯ ಸಂಭವಿಸಬಹುದು. ಈ ಸಂದೇಶ ಸಾಮಾನ್ಯವಾಗಿ RTO E Challan.apk ಅಥವಾ Mparivahan.apk ಹೆಸರಿನ ಫೈಲ್ ಅನ್ನು ಹೊಂದಿರುತ್ತದೆ. ನೀವು ಅದನ್ನು ತೆರೆದ ನಂತರ, ಒಳಗೆ ಅಡಗಿರುವ ಮಾಲ್‌ವೇರ್ ಹ್ಯಾಕರ್‌ಗಳಿಗೆ ನಿಮ್ಮ ಸಾಧನಕ್ಕೆ ರಿಮೋಟ್ ಪ್ರವೇಶವನ್ನು ನೀಡುತ್ತದೆ. ಇದರಿಂದ ಸೈಬರ್ ಅಪರಾಧಿಗಳಿಗೆ ನಿಮ್ಮ ವೈಯಕ್ತಿಕ ಡೇಟಾ, ಬ್ಯಾಂಕ್ ವಿವರಗಳಿಗೆ ಪ್ರವೇಶ ಸಿಗುತ್ತದೆ. ಅವನ್ನು ಅವರು ಕದಿಯಬಹುದು. ನಿಮ್ಮ ಇತರ WhatsApp ಸಂಪರ್ಕಗಳಿಗೆ ಇದೇ ವಂಚನೆ ಸಂದೇಶವನ್ನು ಕಳುಹಿಸಲು ನಿಮ್ಮ ಸಂಖ್ಯೆಯನ್ನು ಸಹ ಬಳಸಬಹುದು.

error: Content is protected !!
Scroll to Top