(ನ್ಯೂಸ್ ಕಡಬ) newskadaba.com, ನ.05: ವಿಜಯಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ನಿನ್ನೆಯಷ್ಟೇ ಭೂಮಿ ಕಂಪಿಸಿತ್ತು, ಇದೀಗ ಮತ್ತೆ ಇಂದು ಬೆಳಿಗ್ಗೆ 9:12 ಗಂಟೆಗೆ ಭೂಮಿ ನಡುಗಿದ ಅನುಭವವಾಗಿ ಜನರು ಭಯಭೀತರಾಗಿ ಹೊರಗೆ ಓಡಿಬಂದ ಘಟನೆ ನಡೆದಿದೆ.
ವಿಜಯಪುರ ನಗರ, ಶಿವಗಿರಿ, ಪಾನಿ ನಗರ, ತೊರವಿ, ಕನಕದಾಸ ಬಡಾವಣೆ ಮತ್ತು ಗೋಳಗುಮ್ಮಟ ಏರಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ವಿಶೇಷವಾಗಿ ನಗರದ ಕೇಂದ್ರ ಭಾಗಗಳಲ್ಲಿ ಜನರಿಗೆ ತೀವ್ರ ಕಂಪನ ಭಾಸವಾಗಿದ್ದು, ಕೆಲವರು ‘ಭೂಮಿ ಕುಸಿಯುತ್ತಿದೆ’ ಎಂದು ಕಿರುಚುತ್ತಾ ಮುಖ್ಯಬೀದಿಗೆ ಓಡೋಡಿ ಬಂದಿದ್ದಾರೆ.












