ನಿರ್ಭೀತ ಹಾಗೂ ಮುಕ್ತ ಮತ ಚಲಾವಣೆಗಾಗಿ ಪೊಲೀಸರಿಂದ ಜಾಗೃತಿ ► ಬೆಳ್ಳಾರೆ ಹಾಗೂ ಸವಣೂರಿನಲ್ಲಿ CRPF ಪಡೆಯಿಂದ ಪಥ ಸಂಚಲನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.30. ವಿಧಾನಸಭಾ ಚುನಾವಣಾ ಕಾವು ಏರಿರುವಂತೆಯೇ ನಿರ್ಭೀತ ಹಾಗೂ ಮುಕ್ತ ಮತ ಚಲಾವಣೆಗೆ ಸಂಬಂದಿಸಿದಂತೆ ಪೊಲೀಸ್ ಇಲಾಖೆಯು ಸರ್ವ ಸನ್ನದ್ಧವಾಗಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳ್ಳಾರೆ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಸವಣೂರಿನಲ್ಲಿ ಬೆಳ್ಳಾರೆ ಪೊಲೀಸರು ಹಾಗೂ ಸಿಆರ್ ಪಿಎಫ್ ಪಡೆಯಿಂದ ಸೋಮವಾರದಂದು ಪಥಸಂಚಲನ ನಡೆಯಿತು.

ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನ ಮಾಂತೂರಿನಿಂದ ಸವಣೂರು ಜಂಕ್ಷನ್ ವರೆಗೆ ಸೋಮವಾರ ಸಂಜೆ ಪಥ ಸಂಚಲನ ನಡೆದಿದ್ದು, ಆ ಬಳಿಕ ಬೆಳ್ಳಾರೆ ಕೆಳಗಿನ ಪೇಟೆಯಿಂದ ವೆಂಕಟರಮಣ ದೇವಸ್ಥಾನದ ವರೆಗೆ ಪಂಥ ಸಂಚಲನ ನಡೆಸುವ ಮೂಲಕ ಚುನಾವಣಾ ಜಾಗೃತಿ ಮೂಡಿಸಲಾಯಿತು. ಪಥ ಸಂಚಲನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಸತೀಶ್, ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ಈರಯ್ಯ, ಸುಳ್ಯ ಠಾಣಾ ಉಪ ನಿರೀಕ್ಷಕ ಮಂಜುನಾಥ್, ಸಿಆರ್ ಪಿಎಫ್ ಪಡೆಯ ಅಸಿಸ್ಟೆಂಟ್ ಕಮಾಂಡೆಂಟ್ ಮುರಳಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Also Read  ಜಯಕರ ಶೆಟ್ಟಿ ಇಂದ್ರಾಳಿ ‘ಸಂಗೊಳ್ಳಿ ರಾಯಣ್ಣ ಪುರಸ್ಕಾರ-2024’ಕ್ಕೆ ಆಯ್ಕೆ

error: Content is protected !!
Scroll to Top