ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆ



(ನ್ಯೂಸ್ಕಡಬ) newskadaba.com,  .04: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣವಾಗಿ ರಷ್ಯಾದಿಂದ ತೈಲ ಖರೀದಿಯಲ್ಲಿ ಉಂಟಾದ ಬದಲಾವಣೆಗಳನ್ನು ಹೇಳಬಹುದು. ಇತ್ತೀಚೆಗೆ ಅಮೆರಿಕ ರಷ್ಯಾದ ತೈಲ ಕಂಪನಿಗಳ ಮೇಲೆ ನೇರ ನಿರ್ಬಂಧಗಳನ್ನು ವಿಧಿಸಿರುವುದರಿಂದ ಭಾರತಕ್ಕೆ ತೈಲ ಸರಬರಾಜು ಕುಂಠಿತಗೊಂಡಿದೆ. ಇದರ ಪರಿಣಾಮವಾಗಿ ತೈಲ ಬೆಲೆಗಳು ಮತ್ತೆ ಏರಿಕೆಯಾಗುವ ಸಾಧ್ಯತೆಗಳಿವೆ…





ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಅಮೆರಿಕ ಹಲವು ಬಾರಿ ಒತ್ತಡ ಹೇರಿತ್ತು. ಆದರೆ ಭಾರತ ತನ್ನ ತೈಲ ನೀತಿಯಲ್ಲಿ ಬದಲಾವಣೆ ಮಾಡಲು ತಕ್ಷಣ ಒಪ್ಪದಿದ್ದರೂ, ಇದೀಗ ಪರಿಸ್ಥಿತಿ ಬದಲಾಗಿದೆ. ಅಕ್ಟೋಬರ್ 22 ರಂದು ಅಮೆರಿಕವು ರೋಸ್‌ನೆಫ್ಟ್ ಮತ್ತು ಲುಕೋಯಿಲ್ ಎಂಬ ರಷ್ಯಾದ ಪ್ರಮುಖ ತೈಲ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದ ನಂತರ, ಭಾರತಕ್ಕೆ ತೈಲ ರಫ್ತು ಪ್ರಮಾಣವು ಗಮನಾರ್ಹವಾಗಿ ಇಳಿದಿದೆ.






ದತ್ತಾಂಶದ ಪ್ರಕಾರ, ಅಕ್ಟೋಬರ್ 27 ಕ್ಕೆ ಕೊನೆಗೊಂಡ ವಾರದಲ್ಲಿ ರಷ್ಯಾದಿಂದ ಭಾರತಕ್ಕೆ ತೈಲ ರಫ್ತು ದಿನಕ್ಕೆ ಕೇವಲ 1.19 ಮಿಲಿಯನ್ ಬ್ಯಾರೆಲ್ ಆಗಿತ್ತು. ಇದು ಹಿಂದಿನ 2  ವಾರಗಳಿಗಿಂತ ಬಹಳ ಕಡಿಮೆ. ಅದಕ್ಕೂ ಮೊದಲು ದಿನಕ್ಕೆ ಸರಾಸರಿ 1.95 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಭಾರತಕ್ಕೆ ಬಂದಿತ್ತು. ಈ ಇಳಿಕೆ ಅಮೆರಿಕದ ನಿರ್ಬಂಧದ ನೇರ ಪರಿಣಾಮ ಎಂದು ತೈಲ ವಿಶ್ಲೇಷಕರು ಹೇಳಿದ್ದಾರೆ.

error: Content is protected !!
Scroll to Top