ರೇಣುಕಾಸ್ವಾಮಿ ಕೊಲೆ ಪ್ರಕರಣ-ನವೆಂಬರ್ 10ಕ್ಕೆ ವಿಚಾರಣೆ ಮುಂದೂಡಿಕೆ



(ನ್ಯೂಸ್ಕಡಬ) newskadaba.com,  .03: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ 57ನೇ ಸೆಷನ್ ಕೋರ್ಟ್ ದರ್ಶನ್‌ ಸೇರಿದಂತೆ ಆರೋಪಿಗಳ ವಿಚಾರಣೆಯನ್ನು ನವೆಂಬರ್‌ 10ಕ್ಕೆ ಮುಂದೂಡಿದೆ. ಜೈಲು ಸೇರಿರುವ ದರ್ಶನ್‌ ಸೇರಿದಂತೆ ಆರೋಪಿಗಳು ನವೆಂಬರ್‌ 3ರಂದು ಬೆಂಗಳೂರು 57ನೇ ಸೆಷನ್ ಕೋರ್ಟ್ ಹಾಜರಾದರು. ಖುದ್ದು ಹಾಜರಾಗಲು ಕೋರ್ಟ್ ಸೂಚಿಸಿತ್ತು. ಇದರಂತೆ ಭಾರಿ ಬಿಗಿ ಭದ್ರತೆಯೊಂದಿಗೆ ಎ2 ಆರೋಪಿ ನಟ ದರ್ಶನ್, ಎ1 ಆರೋಪಿ ಪವಿತ್ರ ಗೌಡ ಸೇರಿದಂತೆ 6 ಆರೋಪಿಗಳು ಸೆಷನ್ ಕೋರ್ಟ್‌ಗೆ ಹಾಜರಾದರು. ಇದೀಗ ದರ್ಶನ್‌ ಸೇರಿದಂತೆ 17 ಮಂದಿಯ ವಿಚಾರಣೆಯನ್ನು ಕೋರ್ಟ್‌ ನವೆಂಬರ್‌ 10ಕ್ಕೆ ಮುಂದೂಡಿದೆ.





ಆಗಸ್ಟ್‌ 14ರಂದು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್‌






ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಿದ ಹಿನ್ನೆಲೆಯಲ್ಲಿ ನಟ ದರ್ಶನ್‌ ಸೇರಿ ಇತರ ಆರೋಪಿಗಳು ಆಗಸ್ಟ್‌ 14ರಂದು ಮತ್ತೆ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆ ಬಳಿಕ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು. ದೋಷಾರೋಪ ಹಿನ್ನೆಲೆಯಲ್ಲಿ 79 ದಿನಗಳ ಬಳಿಕ ಜೈಲಿನಿಂದ ದರ್ಶನ್‌ ಹೊರ ಬಂದು ನ್ಯಾಯಾಲಯಕ್ಕೆ ಆಗಮಿಸಿದರು.

error: Content is protected !!
Scroll to Top