ಕಡಬ: ಬಿಜೆಪಿ ಚುನಾವಣಾ ಕಛೇರಿ ಉದ್ಘಾಟಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ► ದಕ್ಷಿಣ ಭಾರತದ ಪ್ರಮುಖ ಹೆಬ್ಬಾಗಿಲು ಕರ್ನಾಟಕದ ಮೂಲಕ ಬಿಜೆಪಿ ಅಧಿಕಾರಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.30. ಮುಂದಿನ ವಿಧಾನಸಭಾ ಚುನಾವಣೆಯು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮಹತ್ವದ್ದಾಗಿದ್ದು, ಬಿಜೆಪಿಗೆ ದಕ್ಷಿಣ ಭಾರತದ ಪ್ರಮುಖ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಪ್ರವೇಶಿಸಲು ಪ್ರಮುಖವಾದರೆ, ಕಾಂಗ್ರೆಸ್ ಗೆ ಹೆಬ್ಬಾಗಿಲು ಮುಚ್ಚುವಲ್ಲಿ ಮಹತ್ವದ್ದಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಡಬ ಮಹಾ ಶಕ್ತಿ ಕೇಂದ್ರದ ನೂತನ ಚುನಾವಣಾ ಕಛೇರಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸ್ವಜನ ಪಕ್ಷಪಾತದ ಮೂಲಕ ಜನಸಾಮಾನ್ಯರನ್ನು ವಿಂಗಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕಾನೂನು ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ ಎಂದರು. ವೇದಿಕೆಯಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಪ್ರಮುಖರಾದ ವೆಂಕಟ್ ದಂಬೆಕೋಡಿ, ಪುಲಸ್ತ್ಯಾ ರೈ, ಕಿಶೋರ್ ಶೀರಾಡಿ, ಎಸ್.ಎನ್.ಮನ್ಮಥ, ಸತೀಶ್ ನಾಯಕ್, ಪ್ರಕಾಶ್ ಎನ್.ಕೆ., ಮನೋಹರ ರೈ ಮೊದಲಾದವರು ಉಪಸ್ಥಿತರಿದ್ದರು. ಕೃಷ್ಣ ಶೆಟ್ಟಿ ಸ್ವಾಗತಿಸಿ, ವಾಡ್ಯಪ್ಪ ಗೌಡ ಎರ್ಮಾಯಿಲ್ ವಂದಿಸಿದರು.

Also Read  ರಸ್ತೆಬಿಟ್ಟ ಚರಂಡಿಗೆ ಇಳಿದ ಲಾರಿ ➤ ಪ್ರಾಣಾಪಾಯದಿಂದ ಚಾಲಕ, ನಿರ್ವಾಹಕ ಪಾರು

error: Content is protected !!
Scroll to Top